alex Certify
ಕನ್ನಡ ದುನಿಯಾ       Mobile App
       

Kannada Duniya

2 ಜಿ ಹಗರಣ: ರಾಜಾ, ಕನಿಮೋಳಿ ಖುಲಾಸೆ

ನವದೆಹಲಿ: ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ನಡೆದಿದ್ದ 2 ಜಿ ಸ್ಪೆಕ್ಟ್ರಂ ಬಹುಕೋಟಿ ಹಗರಣದ ಅಂತಿಮ ತೀರ್ಪು ಹೊರ ಬಿದ್ದಿದ್ದು, 17 ಮಂದಿ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.

ದೂರ ಸಂಪರ್ಕ ಖಾತೆ ಸಚಿವರಾಗಿದ್ದ ಎ. ರಾಜಾ, ಡಿ.ಎಂ.ಕೆ. ನಾಯಕ ಎಂ. ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಸೇರಿದಂತೆ ಎಲ್ಲಾ 17 ಆರೋಪಿಗಳನ್ನು ಖುಲಾಸೆಗೊಳಿಸಿ, ಸಿ.ಬಿ.ಐ. ವಿಶೇಷ ಕೋರ್ಟ್ ತೀರ್ಪು ನೀಡಿದೆ.

2 ಜಿ ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು, ಸಿ.ಬಿ.ಐ. ತನಿಖೆ ನಡೆಸಲಾಗಿತ್ತು. 3 ದೂರ ಸಂಪರ್ಕ ಕಂಪನಿಗಳು ಸೇರಿ 17 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ತಮಿಳುನಾಡು ಮತ್ತು ದೇಶದ ರಾಜಕಾರಣದಲ್ಲಿ ಈ ಹಗರಣ ಭಾರೀ ಸದ್ದು ಮಾಡಿತ್ತು.

ತೀರ್ಪು ಹೊರ ಬಿದ್ದಿದ್ದು, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಕೋರ್ಟ್ ತೀರ್ಪು ಹೊರ ಬೀಳುತ್ತಿದ್ದಂತೆ ಡಿ.ಎಂ.ಕೆ. ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...