alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಹಂದಿ ಹಾಕಿ ಶಾಲೆಗೆ ಬಂದ ಮಕ್ಕಳಿಗೆ ಸಿಕ್ತು ಶಿಕ್ಷೆ

ಮೆಹಂದಿ ಹಾಕಿಕೊಂಡು ಬಂದ ಮಕ್ಕಳಿಗೆ ಶಿಕ್ಷೆ ನೀಡಿದ ಶಾಲೆ, ಪಾಲಕರ ಮುಂದೆ ಕ್ಷಮೆ ಕೇಳಿದೆ. ಗುಜರಾತಿನ ಭರೂಚ್ ನಗರದ ಹೊರವಲಯದ ಏಂಜೆಲ್ಸ್ ಕಾನ್ವೆಂಟ್ ಸ್ಕೂಲಿನಲ್ಲಿ ಘಟನೆ ನಡೆದಿತ್ತು. ಬಿಜೆಪಿ ಶಾಸಕ ದುಷ್ಯಂತ್ ಪಟೇಲ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಶಾಲೆ ಆಡಳಿತ ಮಂಡಳಿ, ಮೆಹಂದಿ ಹಾಕಿಕೊಂಡು ಬಂದ 25 ಮಕ್ಕಳಿಗೆ ಶಿಕ್ಷೆ ನೀಡಿತ್ತು. ನಾಲ್ಕು ಗಂಟೆಗಳ ಕಾಲ ತರಗತಿಯಿಂದ ಹೊರಗೆ ನಿಲ್ಲುವ ಶಿಕ್ಷೆ ನೀಡಿತ್ತು. ವಾರ ಪೂರ್ತಿ ಗೌರಿ ವೃತ ನಡೆದಿದ್ದು, ಇದ್ರ ಹಿನ್ನೆಲೆಯಲ್ಲಿ ಬಾಲಕಿಯರು ಮೆಹಂದಿ ಹಾಕಿಕೊಂಡಿದ್ದರು. ಎರಡು ದಿನಗಳ ಹಿಂದಷ್ಟೇ ವೃತ ಮುಗಿದಿದೆ.

ಮಕ್ಕಳಿಗೆ ಶಿಕ್ಷೆ ನೀಡಿದ್ದನ್ನು ಕೆಲ ಪಾಲಕರು ವಿರೋಧಿಸಿದ್ದರು. ಬುಧವಾರ ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದರು. ಘಟನೆ ತಿಳಿದ ಶಾಸಕರು ಶಾಲೆಗೆ ಬಂದು ಮಾಹಿತಿ ಕಲೆ ಹಾಕಿದ್ದರು. ಶಾಲೆಯಿಂದ  ಹೊರ ಬಂದು ಮಾಧ್ಯಮದವರ ಜೊತೆ ಮಾತನಾಡಿದ ಪ್ರಿನ್ಸಿಪಾಲರು ಇನ್ಮುಂದೆ ಇಂಥ ಘಟನೆ ನಡೆಯುವುದಿಲ್ಲ ಎಂದು ಕ್ಷಮೆ ಕೋರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...