alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿ ಸಲಗದ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ರು ಜನ

ಶಾಲಾ-ಕಾಲೇಜುಗಳಿಗೆ ರಜೆಯಿರುವ ಕಾರಣ ಈಗ ಪ್ರವಾಸಿ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವ ಕೆಲ ಪ್ರವಾಸಿಗರು ಅಲ್ಲಿನ ನಿಯಾಮವಳಿಗಳನ್ನು ಪಾಲಿಸದೆ ಅಪಾಯಕ್ಕೆ ತುತ್ತಾಗಿರುವ ಘಟನೆಗಳೂ ಈ ಹಿಂದೆ ನಡೆದಿವೆ.

ಇಂತಹುದೇ ಒಂದು ಘಟನೆ ಕೇರಳದ ಪ್ರವಾಸಿ ತಾಣ ಮುನ್ನಾರ್ ನಲ್ಲಿ ಬುಧವಾರದಂದು ನಡೆದಿದೆ. ಮುನ್ನಾರ್-ಮರಿಯೂರು ರಸ್ತೆಯಲ್ಲಿ ಪ್ರವಾಸಿಗರು ಸಾಗುವಾಗ ಅವರುಗಳಿಗೆ ಒಂಟಿ ಸಲಗವೊಂದು ಎದುರಾಗಿದೆ. ಈ ವೇಳೆ ತಮ್ಮ ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿಕೊಂಡ ಪ್ರವಾಸಿಗರು ಒಂಟಿ ಸಲಗವನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದಾರೆ.

ಪ್ರವಾಸಿಗರ ಗುಂಪುಗೂಡಿಕೆಯಿಂದ ಗಾಬರಿಗೊಂಡ ಒಂಟಿ ಸಲಗ ರಸ್ತೆ ದಾಟಲು ಸಾಧ್ಯವಾಗದೆ ನಿಂತಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಅರಣ್ಯಾಧಿಕಾರಿಗಳು ಪ್ರವಾಸಿಗರಿಗೆ ಸೂಚನೆ ನೀಡಿದ್ದು, ಕಾಡು ಪ್ರಾಣಿಗಳು ರಸ್ತೆ ದಾಟುವಾಗ ಯಾವುದೇ ಕಾರಣಕ್ಕೂ ಕೆಳಗಿಳಿಯಬೇಡಿ. ಅಲ್ಲದೇ ಹಾರ್ನ್ ಕೂಡಾ ಮಾಡದೆ ಅದು ಹಾದು ಹೋಗುವವರೆಗೆ ಶಾಂತ ರೀತಿಯಿಂದ ವರ್ತಿಸಿ ಎಂದಿದ್ದಾರೆ. ಒಂಟಿ ಸಲಗ ರೊಚ್ಚಿಗೆದ್ದಿದ್ದರೆ ಪ್ರವಾಸಿಗರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...