alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ‘ಬಂದ್’ ಗೆ ಶಿವಸೇನೆ ಬೆಂಬಲ ನೀಡದಿರುವ ಹಿಂದಿನ ಕಾರಣ

ಮುಂಬಯಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಪ್ರಮುಖ ಮೈತ್ರಿ ಪಕ್ಷ ಎಂದೆನಿಸಿರುವ ಶಿವಸೇನೆ, ಬಂದ್‌ಗೆ ಬೆಂಬಲ ನೀಡಿರಲಿಲ್ಲ. ಕೇಂದ್ರ ಸರಕಾರದ ವಿರುದ್ಧ ಸಾಕಷ್ಟು ಬಾರಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಶಿವಸೇನೆ, ಕಾಂಗ್ರೆಸ್‌ ಹಾಗೂ ಇನ್ನಿತರ ವಿರೋಧ ಪಕ್ಷಗಳು ನೀಡಿದ್ದ ಭಾರತ್‌ ಬಂದ್‌ನಿಂದ ಹಿಂದೆ ಸರಿದಿರುವುದು ಸಾಕಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.

ಇಂಧನ ಬೆಲೆ ಏರಿಕೆಯನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದ ಶಿವಸೇನೆ, ಅಚ್ಛೇ ದಿನ್‌ ಎಂದರೆ ಇದುವೇ? ಎಂದು ಪೋಸ್ಟರ್‌ಗಳನ್ನು ಹಾಕಿ, ವಿರೋಧ ವ್ಯಕ್ತಪಡಿಸಿತ್ತು. ಆದರೂ ಬಂದ್‌ನಲ್ಲಿ ವಿಪಕ್ಷಗಳೊಂದಿಗೆ ಕೈಜೋಡಿಸಿಲ್ಲ. ಇದಕ್ಕೆ ಕಾರಣ, ಒಂದು ದೂರವಾಣಿ ಕರೆ ಅಷ್ಟೇ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆಗೆ ಮಾಡಿದ ಒಂದು ದೂರವಾಣಿ ಕರೆಗೆ ಶಿವಸೇನೆ ಬಂದ್‌ಗೆ ಬೆಂಬಲ ಹಿಂಪಡೆದಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಬಿಜೆಪಿಯ ಅನೇಕ ನಾಯಕರು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕರು ಬಂದ್‌ಗೆ ಬೆಂಬಲ ನೀಡದಂತೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ ಅಮಿತ್‌ ಶಾ ಅವರ ಕರೆ, ಶಿವಸೇನೆ ನಿರ್ಧಾರವನ್ನೇ ಬದಲಿಸಿದೆ ಎಂದು ಗೊತ್ತಾಗಿದೆ.

ಶಿವಸೇನೆಯ ಈ ನಿರ್ಧಾರ ಹಲವಾರು ರಾಜಕೀಯ ಬಣ್ಣಗಳನ್ನು ಪಡೆದುಕೊಳ್ಳುತ್ತಿದ್ದು, ಉಭಯ ಪಕ್ಷಗಳ ನಡುವಿನ ಸಂಬಂಧ ಮತ್ತೆ ಗಟ್ಟಿಯಾಗಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಸೇನೆ ಬಂದ್‌ಗೆ ಬೆಂಬಲ ನೀಡಿದ್ದರೆ, ಬಿಜೆಪಿಗೆ ದೊಡ್ಡ ಮುಖಭಂಗವಾಗುತ್ತಿತ್ತು ಎಂದು ಹೇಳಲಾಗಿದೆ.

ಅಮಿತ್‌ ಶಾ ಹಾಗೂ ದೇವೇಂದ್ರ ಫಡ್ನವೀಸ್‌ ಬಂದ್‌ ಕುರಿತು ಮಾತನಾಡಿದರು. ಹೀಗಾಗಿ ಬಂದ್‌ಗೆ ಬೆಂಬಲ ನೀಡದೇ ಇರಲು ತೀರ್ಮಾನಿಸಿದೆವು. ಇಂಧನ ಬೆಲೆ ಏರಿಕೆ ಸಂಬಂಧ ನಮ್ಮದೇ ದಾರಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ. ಕೇಂದ್ರ ಸರಕಾರದ ಕೆಲ ನೀತಿಗಳ ವಿರುದ್ಧವೂ ನಮ್ಮ ವಿರೋಧವಿದೆ. ಆದರೆ ವಿಪಕ್ಷಗಳು ನೀಡಿರುವ ಬಂದ್‌ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಉದ್ಧವ್‌ ಠಾಕ್ರೆ ಹೇಳಿಕೆ ನೀಡಿದ್ದಾರೆ. ಏತನ್ಮಧ್ಯೆ ರಾಜ್‌ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ್‌ ಸೇನೆ(ಎಂಎನ್‌ಎಸ್‌) ವಿಪಕ್ಷಗಳು ನೀಡಿದ್ದ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...