alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿ ನೀವು ಹೇಳ್ತೀರಾ ಸಲಾಂ

ಶತಮಾನದ ಅತಿ ದೊಡ್ಡ ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಭಾರೀ ಮಳೆ, ಭೂಕುಸಿತ, ಪ್ರವಾಹಕ್ಕೆ ಕೇರಳದಲ್ಲಿ ಈವರೆಗೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಅಪಾರ ಪ್ರಮಾಣದ ಆಸ್ತಿ ನಾಶವಾಗಿದೆ.

ನಿಧಾನವಾಗಿ ಕೇರಳ ಪರಿಸ್ಥಿತಿ ತಹಬದಿಗೆ ಬರ್ತಿದೆ. ಕೆಲ ಪ್ರದೇಶಗಳಲ್ಲಿ ನೀರಿನ ಮಟ್ಟ ತಗ್ಗಿದ್ದು, ಜನರು ಮನೆಗಳಿಗೆ ವಾಪಸ್ ಹೋಗ್ತಿದ್ದಾರೆ. ಬದುಕು ಕಟ್ಟಿಕೊಳ್ಳುವ ಸವಾಲು ಈಗ ಎಲ್ಲರ ಮುಂದಿದೆ. ಇಷ್ಟು ದೊಡ್ಡ ಪ್ರವಾಹ ಬಂದ್ರೂ ಕೇರಳಿಗರ ಆತ್ಮಸ್ಥೈರ್ಯ ಮಾತ್ರ ಕುಗ್ಗಲಿಲ್ಲ. ಹೊಸ ಬದುಕಿನೊಂದಿಗೆ ಮತ್ತೆ ಎದ್ದು ನಿಲ್ಲುವ ಆತ್ಮವಿಶ್ವಾಸ ಅವ್ರಲ್ಲಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಉತ್ತಮ ನಿದರ್ಶನ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ವ್ಯಕ್ತಿಯೊಬ್ಬ ಟೀ ತಯಾರಿಸಿ ನಿರಾಶ್ರಿತರಿಗೆ ನೀಡ್ತಿದ್ದಾನೆ. ಟೀ ನೀಡೋದ್ರಲ್ಲಿ ಏನು ವಿಶೇಷ ಎನ್ನಬೇಡಿ. ಈ ವ್ಯಕ್ತಿ ನೀರಿನಲ್ಲಿ ನಿಂತು ಟೀ ತಯಾರಿಸುವುದಲ್ಲದೆ ನೀರಿನಲ್ಲಿಯೇ ನಿರಾಶ್ರಿತರಿಗೆ ಟೀ ವಿತರಣೆ ಮಾಡ್ತಿದ್ದಾನೆ. ಈತನ ಕೆಲಸಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಕೇರಳಿಗರ ಆತ್ಮವಿಶ್ವಾಸಕ್ಕೆ ಸಲಾಂ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...