alex Certify
ಕನ್ನಡ ದುನಿಯಾ       Mobile App
       

Kannada Duniya

ಬರಿಗೈಯಲ್ಲೇ ಚಿರತೆಯೊಂದಿಗೆ ಸೆಣೆಸಿ ಪಾರಾದ ಧೀರ

leopardದಿನ ನಿತ್ಯದ ಕೆಲಸ ಮುಗಿಸಿಕೊಂಡು ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನೋರ್ವನ ಮೇಲೆ ಚಿರತೆ ಹಠಾತ್ ದಾಳಿ ನಡೆಸಿದ್ದು, ಇದರಿಂದ ಎದೆಗುಂದದ ಆತ ಬರಿಗೈನಲ್ಲೇ ಅದರೊಂದಿಗೆ ಸೆಣೆಸಿ ಸಾವಿನಿಂದ ಪಾರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಲದ ಜಲಪೈಗುರಿ ಜಿಲ್ಲೆಯ 22 ವರ್ಷದ ಸುಮನ್ ರಾಯ್ ಚಿರತೆಯೊಂದಿಗೆ ಸೆಣೆಸಿ ಪಾರಾದವನಾಗಿದ್ದು, ಇದೀಗ ಸ್ಥಳೀಯರ ಕಣ್ಣಲ್ಲಿ ಹೀರೋ ಆಗಿದ್ದಾನೆ.

ಮಾಲ್ ಬಜಾರ್ ಸಬ್ ಡಿವಿಜನ್ ವ್ಯಾಪ್ತಿಯ ಲೀತ್ ರಿವರ್ ಟೀ ಎಸ್ಟೇಟ್ ನಲ್ಲಿ ಕೆಲಸ ಮುಗಿಸಿಕೊಂಡು ಸುಮನ್ ರಾಯ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಚಿರತೆ ಆತನ ಮೇಲೆರಗಿದೆ. ಆತನ ಕುತ್ತಿಗೆಗೆ ಬಾಯಿ ಹಾಕಿದ್ದು, ಈ ಸಂದರ್ಭದಲ್ಲಿ ಸುಮನ್ ರಾಯ್ ತನ್ನ ಕೈಗಳಿಂದ ಚಿರತೆ ಮುಖಕ್ಕೆ ಗುದ್ದಲಾರಂಭಿಸಿದ್ದಾನೆ. ಜೊತೆಗೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಈತನ ಕೂಗು ಹಾಗೂ ಚಿರತೆಯ ಗರ್ಜನೆ ಕೇಳಿದವರು ನೆರವಿಗೆ ಓಡಿ ಬಂದಿದ್ದಾರೆ. ಜನ ಆಗಮಿಸುತ್ತಿದ್ದಂತೆಯೇ ಚಿರತೆ ಅಲ್ಲಿಂದ ಪರಾರಿಯಾಗಿದೆ. ಗಾಯಗೊಂಡ ಸುಮನ್ ರಾಯ್ ಗೆ ಗಾರ್ಡನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಾಲ್ ಬಜಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...