alex Certify
ಕನ್ನಡ ದುನಿಯಾ       Mobile App
       

Kannada Duniya

ಧರ್ಮ ಬದಲಿಸಿದ್ರೂ ದಕ್ಕಲಿಲ್ಲ ಪ್ರೀತಿ….

ಛತ್ತೀಸ್ಗಢದಲ್ಲಿ 23 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಹುಡುಗನೊಬ್ಬ ಹಿಂದೂವಾಗಿ ಪರಿವರ್ತನೆಗೊಂಡಿದ್ದಾನೆ. ವಿಷ್ಯ ಇದಲ್ಲ, ಮದುವೆ ನಂತ್ರ ಪತ್ನಿಯನ್ನು ಆಕೆ ಪಾಲಕರು ಬಂಧಿಸಿಟ್ಟಿದ್ದಾರೆಂದು ಆರೋಪಿಸಿ ಯುವಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ. ಪತ್ನಿ ಜೊತೆ ಜೀವನ ನಡೆಸಲು ಅವಕಾಶ ನೀಡುವಂತೆ ಕೋರಿದ್ದಾನೆ.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪೀಠ, ಛತ್ತೀಸ್ಗಡ ಸರ್ಕಾರದಿಂದ ಉತ್ತರ ಕೇಳಿದೆ. ಆಗಸ್ಟ್ 27ರಂದು ಹುಡುಗಿಯನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿದೆ. ಹಿಂದೂವಾಗಿ ಪರಿವರ್ತನೆಗೊಂಡಿರುವ ಆರ್ಯನ್/ಮೊಹಮ್ಮದ್ ಇಬ್ರಾಹಿಮ್ ಛತ್ತೀಸ್ಗಢ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಪತ್ನಿ ಹಾಗೂ ತನಗೆ ಜೀವ ಬೆದರಿಕೆಯಿದೆ. ಪತ್ನಿಯನ್ನು ಪಾಲಕರು ಬಂಧಿಸಿಟ್ಟಿದ್ದಾರೆ. ನನಗೆ ಜೀವ ಬೆದರಿಕೆಯೊಡ್ಡಿದ್ದಾರೆಂದು ಆರ್ಯನ್ ಆರೋಪ ಮಾಡಿದ್ದಾನೆ. 23 ವರ್ಷದ ಪತ್ನಿ ತನ್ನ ಇಚ್ಛೆಯಂತೆ ಮದುವೆಯಾಗಿದ್ದೇನೆ. ಆರ್ಯನ್ ಜೊತೆ ಜೀವನ ನಡೆಸಲು ಸಿದ್ಧವೆಂದು ಹೈಕೋರ್ಟ್ ಮುಂದೆ ಹೇಳಿದ್ದಳಂತೆ. ಆದ್ರೆ ಹೈಕೋರ್ಟ್ ಯುವತಿಯನ್ನು ಪಾಲಕರ ವಶಕ್ಕೆ ನೀಡಿದೆ ಎಂದು ಆರ್ಯನ್ ದೂರಿದ್ದಾನೆ. ಫೆಬ್ರವರಿ 25ರಂದು ರಾಯ್ಪುರದ ಆರ್ಯ ಸಮುದಾಯ ಭವನದಲ್ಲಿ ಆರ್ಯನ್ ಮದುವೆಯಾಗಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...