alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನ ಸೆಳೆಯುತ್ತಿದೆ ಮದುವೆ ಕಾರ್ಡ್ ನಲ್ಲಿರುವ ಈ ಘೋಷಣೆ

ಮದುವೆ ಕರೆಯೋಲೆ ಮಂಗಳ ಪತ್ರದಲ್ಲಿ ಸಾಮಾನ್ಯವಾಗಿ ಹಿಂದೂ ಧರ್ಮದ ಶ್ಲೋಕ, ಭಗವದ್ಗೀತೆಯ ಸಾಲುಗಳನ್ನು ನಾವು ಕಾಣಬಹುದು. ಆದ್ರೆ ವಾರಣಾಸಿಯಲ್ಲಿ ತಂದೆಯೊಬ್ಬ ಮಗಳ ಮದುವೆಗೆ ತಯಾರಿಸಿರುವ ಕಾರ್ಡ್ ಭಿನ್ನವಾಗಿದೆ. ಪ್ರಧಾನ ಮಂತ್ರಿ ಮೋದಿ ಸಂಸದೀಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಬೆಂಬಲ ಸಿಕ್ಕಿದೆ. ಭೇಟಿ ಬಚಾವೋ ಭೇಟಿ ಪಡಾವೋ ಹಾಗೂ ವರದಕ್ಷಿಣೆ ಪಡೆಯುವುದು ಅಪರಾಧ ಎಂಬ ಘೋಷಣೆಗಳು ಮದುವೆ ಕಾರ್ಡ್ ನಲ್ಲಿ ಮೂಡಿವೆ.

ವಾರಣಾಸಿಯ ರಾಮೇಶ್ವರ್ ಪಟ್ಟಣದ ಕೆ.ಎಲ್ ಪ್ರತೀಕ್ ತನ್ನ ಮಗಳ ಮದುವೆಯನ್ನು ಕಾನ್ಪುರ ದ ರಾಹುಲ್ ಜೊತೆ ಮಾಡಲು ಮುಂದಾಗಿದ್ದಾರೆ. ಫೆಬ್ರವರಿ 19ರಂದು ಮದುವೆ ನಡೆಯಲಿದೆ. ಪ್ರತೀಕ್ ಮಗಳ ಮದುವೆ ಕಾರ್ಡ್ ನಿಂದ ಪ್ರಸಿದ್ಧಿ ಪಡೆದಿದ್ದಾರೆ. ಮದುವೆ ಕಾರ್ಡ್ ನಲ್ಲಿ ಸಮಾಜಕ್ಕೆ ಸಂದೇಶ ಸಾರುವ ಕೆಲಸ ಮಾಡಿದ್ದಾರೆ.

ಕಾರ್ಡ್ ನ ಮೇಲ್ಭಾಗದಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಘೋಷಣೆಯಿದೆ. ನಂತ್ರ ಗಣಪತಿ ಚಿತ್ರವಿದೆ. ಅದ್ರ ಕೆಳಗೆ ಸ್ವಚ್ಛ ಭಾರತ- ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ ಎಂಬ ಘೋಷಣೆಯಿದೆ. ವರದಕ್ಷಿಣೆ ಪಡೆಯುವುದು ಹಾಗೂ ಕೊಡುವುದು ಅಪರಾಧ ಎಂದು ಪ್ರತೀಕ್ ಮದುವೆ ಕಾರ್ಡ್ ಮೇಲೆ ಮುದ್ರಿಸಿದ್ದಾರೆ. ಬಾಲ್ಯ ವಿವಾಹ ಹಾಗೂ ಮಹಿಳಾ ಹಿಂಸೆ ನಿಲ್ಲಿಸಿ ಎಂದು ಕಾರ್ಡ್ ನಲ್ಲಿ ಮುದ್ರಿಸಲಾಗಿದೆ.

ಪ್ರತೀಕ್ ತಯಾರಿಸಿರುವ ಕಾರ್ಡ್ ಗೆ ಸಂಬಂಧಿಕರು ಹಾಗೂ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರಣಾಸಿಯಲ್ಲಿ ವರದಕ್ಷಿಣೆ ಜೋರಾಗಿದೆ. ಆದ್ರೆ ವರನ ಕಡೆಯವರು ವರದಕ್ಷಿಣೆ ನಿರಾಕರಿಸಿದ್ದಾರೆ ಎಂದು ಪ್ರತೀಕ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...