alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರಿಜ್, ಕಪಾಟು, ಬ್ರೀಫ್ ಕೇಸ್ ಹೀಗೆ ಸಿಕ್ತು 5 ಶವ…!

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿರುವ ಪತಿ ನಂತ್ರ ನೇಣಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಕಾರಣ ಹುಡುಕುತ್ತಿದ್ದಾರೆ. ಹೊರಗಿನವರ ಕೈವಾಡವಿದ್ಯಾ ಎನ್ನುವ ಬಗ್ಗೆಯೂ ವಿಚಾರಣೆ ಶುರು ಮಾಡಿದ್ದಾರೆ.

ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಮೃತ ಮನೋಜ್ ಮನೆ ಬಾಗಿಲು ಹಾಕಿತ್ತು. ರಾತ್ರಿಯಾದ್ರೂ ಮನೆ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತ್ರ ಮನೋಜ್ ಮನೆ ಬಾಗಿಲು ಮುರಿದಿದ್ದಾರೆ.

ಮನೆ ಬಾಗಿಲು ತೆರೆಯುತ್ತಿದ್ದಂತೆ ಪೊಲೀಸರು ದಂಗಾಗಿದ್ದಾರೆ. ಪತ್ನಿ ಶ್ವೇತಾ ಶವ ಫ್ರಿಜ್ ನಲ್ಲಿತ್ತು. ದೊಡ್ಡ ಮಗಳ ಶವ ಕಪಾಟಿನಲ್ಲಿ ಸಿಕ್ಕಿದೆ. 6 ವರ್ಷದ 2ನೇ ಮಗಳ ಶವ ಬ್ರೀಫ್ ಕೇಸ್ ನಲ್ಲಿ ಹಾಗೂ 2 ವರ್ಷದ ಮಗಳ ಶವ ನೆಲದ ಮೇಲೆ ಬಿದ್ದಿತ್ತು. ಇದಲ್ಲದೆ ತಂದೆ ಮನೋಜ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿತ್ತು. ಮನೆಯಿಂದ ದೊಡ್ಡದಾಗಿ ಹಾಡು ಕೇಳಿ ಬರ್ತಿತ್ತಂತೆ. ಆದ್ರೆ ಯಾರೂ ಬಾಗಿಲು ತೆರೆಯಲಿಲ್ಲವಂತೆ. ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...