alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಸಾವಿಗೆ ಕಾರಣವಾಗಿತ್ತು ಪತ್ನಿ ತೂಕ…!

ಆಶ್ಚರ್ಯಕರ ಘಟನೆಯೊಂದು ರಾಜ್ಕೋಟ್ ನಲ್ಲಿ ಜುಲೈ 5, 2016 ರಂದು ನಡೆದಿತ್ತು. ಪತ್ನಿ ಅಡಿ ಸಿಲುಕಿ ಪತಿಯೊಬ್ಬ ಸಾವನ್ನಪ್ಪಿದ್ದ. ಪತ್ನಿ 128 ಕೆ.ಜಿ. ತೂಕವಿದ್ದುದ್ದೇ ಈ ಘಟನೆಗೆ ಕಾರಣವಾಗಿತ್ತು.

ರಾಮ್ಧಾದ್ ಸೊಸೈಟಿಯಲ್ಲಿ ಈ ಘಟನೆ ನಡೆದಿತ್ತು. ಪತಿ ಮೈ ಮೇಲೆ ಪತ್ನಿ ಬಿದ್ದಿದ್ದಳು. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದವು. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಗಾಯಗೊಂಡಿದ್ದ ಇಬ್ಬರಲ್ಲಿ ಒಬ್ಬರನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜ್ಕೋಟ್ ಜನರಲ್ಲಿ ಇದು ಚರ್ಚೆಯ ವಿಷ್ಯವಾಗಿ ಮಾರ್ಪಟ್ಟಿತ್ತು. ಅಷ್ಟಕ್ಕೂ ಈ ಘಟನೆ ನಡೆದಿದ್ದು, ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡಲು ಶುರುವಾಗಿತ್ತು.

ರಾಮ್ಧಾದ್ ಸೊಸೈಟಿಯಲ್ಲಿ ವಾಸವಾಗಿರುವ 68 ವರ್ಷದ ಮಂಜುಳಾ 128 ಕೆ.ಜಿ. ತೂಕವಿದ್ದಳು. ಘಟನೆ ನಡೆದ ದಿನ ಆಕೆ ಮಗನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆತಂಕಗೊಂಡ ಮಂಜುಳಾ ಮಹಡಿ ಮೇಲಿರುವ ಮಗನ ರೂಮಿಗೆ ಔಷಧಿ ತರಲು ಓಡಿದ್ದಳು.

ಆಕೆ ಹಿಂದೆಯೇ ಪತಿ ಮೆಟ್ಟಿಲು ಹತ್ತಲು ಶುರುಮಾಡಿದ್ದ. ಆದ್ರೆ ಮಂಜುಳಾ ಕಾಲು ಜಾರಿ ಕೆಳಗೆ ಬಿದ್ದಿದ್ದಳು. ಪತಿ ಮೈಮೇಲೆ ಮಂಜುಳಾ ಬಿದ್ದಿದ್ದರಿಂದ ನಟವರ್ಲಾಲ್ ಕತ್ತಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಘಟನೆ ಈಗ್ಲೂ ರಾಜ್ಕೋಟ್ ಜನರ ಬಾಯಲ್ಲಿ ಹರಿದಾಡ್ತಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...