alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಸಂಸದನಿಗೆ ಮಹಿಳೆಯಿಂದ ಬ್ಲ್ಯಾಕ್ ಮೇಲ್

honeytrap_1493609385_749x421

ಬಿಜೆಪಿ ಲೋಕಸಭಾ ಸಂಸದರೊಬ್ಬರು ಹನಿ ಟ್ರ್ಯಾಪ್ ನಲ್ಲಿ ಸಿಲುಕಿಕೊಂಡಿದ್ದಾರೆ. ಮಹಿಳೆ ನಡೆಸುತ್ತಿರುವ ಗ್ಯಾಂಗೊಂದು ನನ್ನನ್ನು ಹನಿ ಟ್ರ್ಯಾಪ್ ಮಾಡಿದೆ ಎಂದು ಸಂಸದರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಸದರ ಪ್ರಕಾರ ಅವರನ್ನು ಘಾಜಿಯಾಬಾದ್ ಗೆ ಕರೆದೊಯ್ದು ಅಶ್ಲೀಲ ವಿಡಿಯೋ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಗ್ಯಾಂಗ್ ನ ಲೀಡರ್ ಮಹಿಳೆ 5 ಕೋಟಿ ರೂಪಾಯಿ ಕೇಳುತ್ತಿದ್ದಾಳೆಂದು ಸಂಸದರು ದೂರಿದ್ದಾರೆ.

ಸಂಸದರ ಹೇಳಿಕೆ ಮೇರೆಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಒಂದು ತಂಡವನ್ನು ರಚಿಸಲಾಗಿದ್ದು, ಆದಷ್ಟು ಬೇಗ ಗ್ಯಾಂಗ್ ಪತ್ತೆ ಹಚ್ಚುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಜೆಪಿ ಸಂಸದರೊಂದೇ ಅಲ್ಲ ಇನ್ನೂ ಅನೇಕ ನಾಯಕರನ್ನು ಈ ಗ್ಯಾಂಗ್ ಟ್ರ್ಯಾಪ್ ಮಾಡಿದೆ ಎಂದು ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸಂಸದರು ಹಣ ನೀಡದ ಕಾರಣ ವಿಡಿಯೋ ಬಹಿರಂಗ ಮಾಡುವ ಬೆದರಿಕೆಯೊಡ್ಡಿದೆ ಗ್ಯಾಂಗ್. ಸಂಸದರ ಮೇಲೆ ಅತ್ಯಾಚಾರದ ದೂರು ದಾಖಲಿಸುವ ಬೆದರಿಕೆಯನ್ನೂ ಹಾಕಿತ್ತು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...