alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ಮಾರುವವನ ಖಾತೆಯಲ್ಲಿತ್ತು 4.8 ಕೋಟಿ ರೂ…!

black-money759ಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದು, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಹಾಗೂ ಪಡೆಯಲು ಹಲವು ನಿರ್ಬಂಧಗಳನ್ನು ವಿಧಿಸಿದೆ.

ತಮ್ಮ ಖಾತೆಯಲ್ಲಿರುವ ಹಣವನ್ನು ಪಡೆಯಲು ಗ್ರಾಹಕರು ಪರದಾಡುವಂತಾಗಿದ್ದು, ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಇದರಿಂದಾಗಿ ಬ್ಯಾಂಕ್ ನೌಕರರು ಒತ್ತಡದಲ್ಲಿದ್ದು, ಈ ಸಂದರ್ಭದಲ್ಲಿ ಕೆಲವೆಡೆ ಪ್ರಮಾದವಾಗಿರುವುದು ಬೆಳಕಿಗೆ ಬಂದಿದೆ. ಪಂಜಾಬ್ ನ ಟ್ಯಾಕ್ಸಿ ಚಾಲಕನೊಬ್ಬರ ಜನಧನ್ ಖಾತೆಗೆ 9,806 ಕೋಟಿ ರೂ. ಜಮೆಯಾಗಿದ್ದ ಘಟನೆ ಬಳಿಕ ರಾಜಸ್ಥಾನದಲ್ಲಿ ಚಹಾ ಮಾರಾಟ ಮಾಡುವವನ ಖಾತೆಗೆ 4.8 ಕೋಟಿ ರೂ. ಜಮೆಯಾಗಿದ್ದು, ಇದರಿಂದಾಗಿ ಆತ ಇನ್ನಿಲ್ಲದ ಪರಿಪಾಟಲು ಪಟ್ಟಿದ್ದಾನೆ.

ಜೈಪುರದ ಉದ್ಯೋಗ ಭವನ್ ಬಳಿ ಚಹಾ ಮಾರಾಟ ಮಾಡುವ ರಾಜಕುಮಾರ್ ನ ಬ್ಯಾಂಕ್ ಆಫ್ ಬರೋಡಾ ಖಾತೆಗೆ 4.8 ಕೋಟಿ ರೂ. ಜಮೆಯಾಗಿದ್ದು, ಇದರ ಅರಿವೇ ಆತನಿಗಿರಲಿಲ್ಲ. ಆದರೆ ಕಪ್ಪು ಹಣದ ಬಗ್ಗೆ ಕಣ್ಣಿಟ್ಟಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆತನ ಮನೆ ಬಾಗಿಲು ಬಡಿದಾಗ ರಾಜಕುಮಾರ್ ಗೆ ತನ್ನ ಖಾತೆಯಲ್ಲಿ ಇಷ್ಟು ಮೊತ್ತ ಜಮೆಯಾಗಿದೆ ಎಂಬ ವಿಷಯ ತಿಳಿದುಬಂದಿದೆ.

ಆತನನ್ನು ಕಛೇರಿಗೆ ಕರೆದುಕೊಂಡು ಹೋದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಷ್ಟು ಹಣ ಎಲ್ಲಿಂದ ಬಂತು. ಇದರ ಮೂಲವೇನು ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಾಗ ರಾಜಕುಮಾರ್ ಕಂಗಾಲಾಗಿ ಹೋಗಿದ್ದಾನೆ. ಬಳಿಕ ಬ್ಯಾಂಕ್ ಗೆ ತೆರಳಿ ವಿಚಾರಿಸಿದಾಗ ನಡೆದ ಪ್ರಮಾದ ಬೆಳಕಿಗೆ ಬಂದಿದೆ. ರಾಜಕುಮಾರ್ ತನ್ನ ಬಳಿಯಿದ್ದ 1000 ರೂ. ಮುಖ ಬೆಲೆಯ 48 ನೋಟುಗಳನ್ನು ಬ್ಯಾಂಕ್ ಗೆ ಜಮಾ ಮಾಡಿದ್ದು, ಒತ್ತಡದಲ್ಲಿದ್ದ ಬ್ಯಾಂಕ್ ಅಧಿಕಾರಿ ಅದಕ್ಕೆ ಇನ್ನಷ್ಟು ಸೊನ್ನೆಗಳನ್ನು ಸೇರಿಸಿದ ಕಾರಣ ಮೊತ್ತ 4.8 ಕೋಟಿ ರೂಪಾಯಿಗಳಾಗಿದೆ. ಆದಾಯ ತೆರಿಗೆ ಅಧಿಕಾರಿಗಳಿಗೂ ಇದು ಮನವರಿಕೆಯಾಗಿದ್ದು, ರಾಜಕುಮಾರ್ ನನ್ನು ಬಿಟ್ಟು ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...