alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಯಲ್ಲೇ ಯುವತಿಯ ರಂಪಾಟ

ಹತ್ತು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಆದ್ರೆ ಯುವತಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನನ್ನನ್ನು ಯಾರೂ ಅಪಹರಿಸಿರಲಿಲ್ಲ. ನಾನೇ ಓಡಿ ಹೋಗಿದ್ದೆ. ನನಗೆ ಮದುವೆಯಾಗಿದೆ. ನನ್ನಿಚ್ಛೆಯಂತೆ ಧರ್ಮ ಪರಿವರ್ತನೆ ಮಾಡಿಕೊಳ್ಳುತ್ತೇನೆಂದು ಯುವತಿ ಹೇಳಿದ್ದಾಳೆ.

ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಫೆಬ್ರವರಿ 8 ರಂದು ಯುವತಿ ಕಾಣೆಯಾಗಿದ್ದಳು. ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಾನುವಾರ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಆದ್ರೆ ಯುವತಿ ತಾನು ಅಪಹರಣಕ್ಕೊಳಗಾಗಿಲ್ಲ ಎಂದಿದ್ದಾಳೆ.

ರಾಕೇಶ್ ಜೊತೆ ಕಾನೂನಿನ ಮೂಲಕವೇ ಮದುವೆಯಾಗಿದ್ದು, ಆತನ ಜೊತೆಯೇ ಜೀವನ ಮುಂದುವರೆಸುತ್ತೇನೆ ಎಂದು ಯುವತಿ ಹೇಳಿದ್ದಾಳೆ. ಆದ್ರೆ ಕುಟುಂಬಸ್ಥರು ಮಾತ್ರ ಇದು ಅಪಹರಣ ಎನ್ನುತ್ತಿದ್ದಾರೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...