alex Certify
ಕನ್ನಡ ದುನಿಯಾ       Mobile App
       

Kannada Duniya

‘ಎ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಸಿಕ್ತು ರಾಜನಾಥ್ ಬೆಂಬಲ

rajnath-singh

ಕರಣ್ ಜೋಹರ್ ಚಿತ್ರ ‘ಎ ದಿಲ್ ಹೇ ಮುಷ್ಕಿಲ್’ ಬಿಡುಗಡೆಗೆ ಸಾಕಷ್ಟು ತೊಂದರೆಗಳು ಎದುರಾಗ್ತಾ ಇವೆ. ರಾಜ್ ಠಾಕ್ರೆ ಧಮಕಿ ನಂತ್ರ ನಿರ್ಮಾಪಕರ ಗಿಲ್ಡ್, ದೆಹಲಿಗೆ ತೆರಳಿ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದೆ. ರಾಜನಾಥ್ ಸಿಂಗ್ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಚಿತ್ರ ಬಿಡುಗಡೆಗೆ ಭದ್ರತೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ರಾಜನಾಥ್ ಸಿಂಗ್ ಭೇಟಿ ನಂತ್ರ ಮಾತನಾಡಿದ ನಿರ್ಮಾಪಕರು, ಚಿತ್ರ ನಿಗದಿಯಂತೆ ಬಿಡುಗಡೆಯಾಗಲಿದೆ ಎಂದಿದ್ದಾರೆ. ಎಂಎನ್ಎಸ್ ಗೂಂಡಾಗಿರಿ ಮಾಡ್ತಾ ಇದೆ. ಅವರಿಗೆ ಚಿತ್ರ ಜಗತ್ತು ತಲೆ ಬಾಗುವುದಿಲ್ಲ. ಭಾರತ- ಪಾಕಿಸ್ತಾನ ಸಂಬಂಧ ಚೆನ್ನಾಗಿದ್ದ ವೇಳೆ ಪಾಕ್ ನಟನನ್ನು ಈ ಚಿತ್ರಕ್ಕೆ ತೆಗೆದುಕೊಳ್ಳಲಾಗಿತ್ತು ಎಂದಿದ್ದಾರೆ. ಶುಕ್ರವಾರ ಕರಣ್ ಜೋಹರ್ ಮುಂಬೈನಲ್ಲಿ ರಾಜನಾಥ್ ಸಿಂಗ್ ರನ್ನು ಭೇಟಿಯಾಗಲಿದ್ದಾರೆ.

‘ಎ ದಿಲ್ ಹೇ ಮುಷ್ಕಿಲ್’ ಇದೇ 28 ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿದ್ದಾನೆ. ಹಾಗಾಗಿ ಚಿತ್ರ ಬಿಡುಗಡೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎಂಎನ್ಎಸ್, ಚಿತ್ರಮಂದಿರದ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ಒಂದು ವೇಳೆ ಚಿತ್ರ ಬಿಡುಗಡೆ ಮಾಡಿದ್ರೆ ಥಿಯೇಟರ್ ಮೇಲೆ ದಾಳಿ ನಡೆಸುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...