alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಭಿಕ್ಷುಕನಿಗೆ ಹೇಳಿ ಹ್ಯಾಟ್ಸಾಫ್

begging-bowl-designed-for-pigeons-platform

ಹಂಚಿದ್ದು ತನಗೆ, ಕೂಡಿಟ್ಟಿದ್ದು ಪರರಿಗೆ ಎಂಬ ಮಾತು ಪ್ರಚಲಿತದಲ್ಲಿದೆ. ಅದು ಮಾತಿಗಷ್ಟೇ ಸೀಮಿತ. ಬಹುತೇಕ ಮಂದಿ ತಮ್ಮ ಮುಂದಿನ ತಲೆಮಾರಿಗೂ ಆಗುವಷ್ಟನ್ನು ಕೂಡಿಡುತ್ತಾರೆ. ಆದರೆ, ಭಿಕ್ಷುಕನೊಬ್ಬ ತನ್ನ ಸಂಪಾದನೆಯನ್ನೆಲ್ಲಾ ಸೇವಾಕಾರ್ಯಕ್ಕೆ ಬಳಸುವ ಮೂಲಕ ಮಾದರಿಯಾಗಿದ್ದಾನೆ.

ಇತ್ತೀಚೆಗಷ್ಟೇ ಭಿಕ್ಷಕರೊಬ್ಬರು ತಮ್ಮ ಗ್ರಾಮದ ಹೆಣ್ಣುಮಕ್ಕಳಿಗೆ ಒಡವೆ ಮಾಡಿಸಿಕೊಟ್ಟಿದ್ದನ್ನು ಕೇಳಿರುತ್ತೀರಿ. ಗುಜರಾತ್ ಕಛ್ ಬಳಿಯ ಗ್ರಾಮವೊಂದರಲ್ಲಿರುವ ಪೋಪಟ್ ಎಂಬ ಹೆಸರಿನ ಈ ಭಿಕ್ಷುಕ, ತಮ್ಮ ಜೀವನವಿಡೀ ದುಡಿದ ಸಂಪಾದನೆಯನ್ನು ಪಾರಿವಾಳಗಳ ಆಶ್ರಯತಾಣ ನಿರ್ಮಾಣ ಮಾಡಲು ಕೊಟ್ಟಿದ್ದಾರೆ. ಭಿಕ್ಷೆ ಬೇಡಿ ಬಂದ ಹಣವನ್ನು ಸ್ವಲ್ಪ ತನಗೆ ಇಟ್ಟುಕೊಂಡು ಮಿಕ್ಕಿದ್ದನ್ನು ಕಛ್ ನಲ್ಲಿರುವ ಮೌನಿ ಬಾಬಾ ಬಿಹಾರಿಲಾಲ್ ದೇವಾಲಯದ ಅರ್ಚಕರ ಕೈಗೆ ಪೋಪಟ್ ಕೊಡುತ್ತಿದ್ದರು. ಅವರ ಹೆಸರಿನಲ್ಲೇ ಬ್ಯಾಂಕ್ ಖಾತೆ ತೆರೆದು ಅದಕ್ಕೆ ಅರ್ಚಕರು ಹಣ ಜಮಾ ಮಾಡುತ್ತಿದ್ದರು.

ಹೀಗೆ ಪೋಪಟ್ ಭಿಕ್ಷೆ ಬೇಡಿ ಕಳೆದ 40 ವರ್ಷಗಳಿಂದ ಕೂಡಿಟ್ಟ ಹಣ ಬರೋಬ್ಬರಿ 1.15 ಲಕ್ಷ ರೂ. ಆಗಿದ್ದು, ಆ ಹಣದಲ್ಲಿ ಪಾರಿವಾಳಗಳಿಗೆ ಆಶ್ರಯತಾಣವೊಂದನ್ನು ನಿರ್ಮಿಸಲಾಗುತ್ತಿದೆ. ಗುಜರಾತ್ ಗ್ರಾಮೀಣ ಪ್ರದೇಶಗಳಲ್ಲಿ ಪಾರಿವಾಳಗಳನ್ನು ಹೆಚ್ಚಾಗಿ ಸಾಕುತ್ತಾರೆ. ಹಾಗಾಗಿ ಪೋಪಟ್ ತಮ್ಮ ದುಡಿಮೆಯ ಹಣವನ್ನೆಲ್ಲಾ ಸುರಿದು ಪಾರಿವಾಳಗಳ ಆಶ್ರಯ ತಾಣ ನಿರ್ಮಿಸಲು ನೆರವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...