alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಧ್ರಪ್ರದೇಶದಲ್ಲಿ ಅಪರೂಪದ ಮಗು ಜನನ

bbay

ಆಂಧ್ರಪ್ರದೇಶದ ಕಾಕಿನಾಡ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಕಾಲುಗಳ ಮಗುವೊಂದು ಜನಿಸಿದೆ. ಅಪರೂಪದ ಮಗುವನ್ನು ನೋಡಿ ವೈದ್ಯರು ಸೇರಿದಂತೆ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ.

ಇದೊಂದು ಅತ್ಯಂತ ಅಪರೂಪದ ಹಾಗೂ ವಿಚಿತ್ರ ಘಟನೆಯಾಗಿದೆ. 10 ಲಕ್ಷ ಮಂದಿಯಲ್ಲಿ ಒಬ್ಬರಿಗೆ ಇಂತ ಮಗು ಜನಿಸುತ್ತದೆ ಎಂದು ಮಕ್ಕಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಂಡಪೇಟಾ ಜಿಲ್ಲೆಯ ಗ್ರಾಮವೊಂದರ 25 ವರ್ಷದ ಮಣಿ ಎಂಬಾಕೆ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗಿದ್ದ ನಾಲ್ಕು ಕಾಲು ನೋಡಿ ವೈದ್ಯರು ಆಶ್ಚರ್ಯಗೊಂಡಿದ್ದಾರೆ.

ನಾಲ್ಕು ಕಾಲುಗಳಿರುವ ಮಗು ಆರೋಗ್ಯವಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ನಾಲ್ಕು ಕಾಲುಗಳ ಮಗು ಜನಿಸಿದೆ ಎಂಬ ಸುದ್ದಿ ಕೇಳ್ತಿದ್ದಂತೆ ಇದನ್ನು ನೋಡಲು ಆಸ್ಪತ್ರೆಗೆ ಜನಸಾಗರವೇ ಹರಿದು ಬರ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...