alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಲ್ಲಿ ಪೋರ್ನ್ ನೋಡ್ತಿದ್ದ 16 ರ ಹುಡುಗ ಮಾಡ್ದ ಇಂಥ ಕೆಲಸ

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ 16 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾತ್ರಿ ಮೊಬೈಲ್ ನೋಡದಂತೆ ತಾಕೀತು ಮಾಡಿದ್ದ ತಾಯಿ ಮೊಬೈಲ್ ಕಸಿದುಕೊಂಡಿದ್ದಳು. ಇದ್ರಿಂದ ಬೇಸತ್ತ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ವಿದ್ಯಾರ್ಥಿ ರಾತ್ರಿ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡ್ತಿದ್ದ ಎನ್ನಲಾಗಿದೆ. ಇದು ತಾಯಿಯ ಚಿಂತೆಗೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಮಗನಿಗೆ ಅನೇಕ ಬಾರಿ ಬೈದಿದ್ದಳಂತೆ. ಮೃತ ಸೌಕತ್ ಮುಖ್ಯ ಪರೀಕ್ಷೆಯಲ್ಲಿ ಶೇಕಡಾ 83 ರಷ್ಟು ಅಂಕ ಪಡೆದಿದ್ದನಂತೆ. ಖುಷಿಯಲ್ಲಿ ಪಾಲಕರು ಮೊಬೈಲ್ ಕೊಡಿಸಿದ್ದರಂತೆ.

ಎರಡು ದಿನಗಳ ಹಿಂದಷ್ಟೇ ಮಗನ ಮೊಬೈಲ್ ನಲ್ಲಿ ತಾಯಿ ಅಶ್ಲೀಲ ವಿಡಿಯೋ ನೋಡಿದ್ದಾಳೆ. ನಂತ್ರ ಮಗನಿಗೆ ಬೈದು ಮೊಬೈಲ್ ಕಸಿದುಕೊಂಡಿದ್ದಳಂತೆ. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಪಾಲಕರು ಸೇರಿದಂತೆ ಸುತ್ತಮುತ್ತಲ ಜನರಿಗೆ ಆಘಾತವುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...