alex Certify
ಕನ್ನಡ ದುನಿಯಾ       Mobile App
       

Kannada Duniya

100 ಕ್ಕೆ 98 ಅಂಕ ಪಡೆದ 96 ವರ್ಷದ ವೃದ್ದೆ…!

ತಿರುವನಂತಪುರ: ಕಲಿಕೆಗೆ ವಯಸ್ಸು ಮುಖ್ಯವಲ್ಲ ಎಂಬುದಕ್ಕೆ ಸಂಪೂರ್ಣ ಸಾಕ್ಷರತಾ ರಾಜ್ಯವೆಂದೇ ಪರಿಗಣಿತವಾಗಿರುವ ಕೇರಳದ ಈ ವೃದ್ಧೆಯೇ ಸಾಕ್ಷಿ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಾಕ್ಷರತಾ ಪರೀಕ್ಷೆಯಲ್ಲಿ 96ರ ಹರೆಯದ ಕಾತ್ಯಾಯಿನಿ ಅಮ್ಮ ನೂರರಲ್ಲಿ 98 ಅಂಕಗಳನ್ನು ಗಳಿಸಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಕೇರಳ ಸಾಕ್ಷರತಾ ಮಿಷನ್ ವಿವಿಧ ಸ್ತರಗಳಲ್ಲಿ ಸಾಕ್ಷರತಾ ಪರೀಕ್ಷೆಗಳನ್ನು ನಡೆಸಿತ್ತು. ಇದರಲ್ಲಿ ರಾಜ್ಯದ ಸುಮಾರು 42 ಸಾವಿರ ಮಂದಿ ತೇರ್ಗಡೆ ಹೊಂದಿದ್ದರು. ಇದರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಈ ಸಾಧಕಿ ಕಾತ್ಯಾಯಿನಿ ಅಮ್ಮ ಅವರಿಗೆ ನವೆಂಬರ್ ಒಂದರಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪತ್ರ ವಿತರಿಸಲಿದ್ದಾರೆ.

ಅಲಪುಝಾ ಜಿಲ್ಲೆಯ ಮುಟ್ಟಂ ಗ್ರಾಮದ ಈ ಸಾಧಕಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ಸಾಕ್ಷರತಾ ಆಂದೋಲನದ ಅಧಿಕಾರಿಗಳು, ಕಾತ್ಯಾಯಿನಿ ಅಮ್ಮ ಈ ಪರೀಕ್ಷೆಗೆ ಹಾಜರಾಗಿ, ಪಾಸಾದ ಅತ್ಯಂತ ಹಿರಿಯ ಅಭ್ಯರ್ಥಿ ಎಂದು ತಿಳಿಸಿದ್ದಾರೆ.

ತನ್ನ ಈ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕಾತ್ಯಾಯಿನಿ ಅಮ್ಮ, ಕೊನೆಗೂ ನಾನು ಓದುವುದು, ಬರೆಯುವುದು ಮತ್ತು ಲೆಕ್ಕ ಮಾಡುವುದು ಹೇಗೆ ಎಂಬುದನ್ನು ಕಲಿತುಕೊಂಡೆ ಎಂಬುದಾಗಿ ತಿಳಿಸಿದ್ದಾರೆ. ಮಹೀಂದ್ರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರ, ಕೇಂದ್ರ ಸಚಿವ ಅಲ್ಫೋನ್ಸ್ ಕನ್ನಂಥಾನಮ್ ಸೇರಿದಂತೆ ಅನೇಕರು ಈ ಅಪೂರ್ವ ಸಾಧನೆಗೆ ಸೋಶಿಯನ್ ಮೀಡಿಯಾಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...