alex Certify
ಕನ್ನಡ ದುನಿಯಾ       Mobile App
       

Kannada Duniya

91 ರ ಅಜ್ಜಿಗೂ ಟ್ಯಾಟೂ ಕ್ರೇಝ್…!

ಮುಂಬೈನಲ್ಲಿ 91 ವರ್ಷದ ವೃದ್ಧೆಯೊಬ್ಳು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಆರ್ಟಿಸ್ಟ್ ವಿಕಾಸ್ ಮಲಾನಿ, ಅಜ್ಜಿಗೆ ಸುಂದರವಾದ ಟ್ಯಾಟೂ ಹಾಕಿದ್ದಾರೆ. ಶಾರದಾ ಜಾವರ್ ಸಂಪ್ರದಾಯಸ್ಥೆ, ಶಿವನನ್ನು ಆರಾಧಿಸ್ತಾಳೆ.

ಹಾಗಾಗಿ ಕೈ ಮೇಲೆ ಶಿವನ ಟ್ಯಾಟೂ ಹಾಕಿಸಿಕೊಳ್ಳಬೇಕು ಅನ್ನೋ ಆಸೆ ಅವಳಿಗಿತ್ತು. ಸೊಸೆ ಹಾಕಿಸಿಕೊಂಡಿದ್ದ ಟ್ಯಾಟೂ ನೋಡಿ ತಾನು ಕೂಡ ವಿಕಾಸ್ ಅವರ ಸ್ಟುಡಿಯೋಗೆ ಬಂದಿದ್ಲು. ಅಜ್ಜಿಗೆ ಶಿವನ ಢಮರುಗದ ಚಿತ್ರವನ್ನು ಕೈಗಳ ಮೇಲೆ ಮೂಡಿಸಿದ್ದಾರೆ ವಿಕಾಸ್.

91ನೇ ವರ್ಷದಲ್ಲಿ ಆಕೆ ಮೊದಲ ಟ್ಯಾಟೂ ಹಾಕಿಸಿಕೊಳ್ತಿರೋದು ನಿಜಕ್ಕೂ ಖುಷಿಯ ಸಂಗತಿ ಅಂತಾ ವಿಕಾಸ್ ಹೇಳಿದ್ದಾರೆ. ಯಾವುದೇ ರೀತಿಯ ಮುಜುಗರ, ಹಿಂಜರಿಕೆ ಇಲ್ಲದೆ ಶಾರದಾ ತಮಗನಿಸಿದ್ದನ್ನು ಮಾಡುತ್ತಲೇ ಬಂದಿದ್ದಾರಂತೆ. ಇದೀಗ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂಬ ಆಸೆಯನ್ನು ಕೂಡ ಈಡೇರಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...