alex Certify
ಕನ್ನಡ ದುನಿಯಾ       Mobile App
       

Kannada Duniya

9 ವರ್ಷಗಳ ಬಳಿಕ ಮುಂಬೈಗೆ ಬಂದ ಮೋಶೆ

ಮುಂಬೈ: ಮುಂಬೈ ಮೇಲೆ ಉಗ್ರರು ನಡೆಸಿದ 26/11 ರ ದಾಳಿಯಲ್ಲಿ, ಪೋಷಕರನ್ನು ಕಳೆದುಕೊಂಡಿದ್ದ ಬಾಲಕ ಮೋಶೆ(11) 9 ವರ್ಷಗಳ ಬಳಿಕ ಮುಂಬೈ ಏರ್ ಪೋರ್ಟ್ ಗೆ ಆಗಮಿಸಿದ್ದಾನೆ.

2008 ರ ನವೆಂಬರ್ 26 ರಂದು ಮುಂಬೈನಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ ಮೋಶೆ ತಂದೆ ಹಾಗೂ ತಾಯಿಯನ್ನು ಹತ್ಯೆ ಮಾಡಲಾಗಿತ್ತು. ಆಗ 2 ವರ್ಷದ ಮಗುವಾಗಿದ್ದ ಮೋಶೆ ಇಸ್ರೇಲ್ ನಲ್ಲಿ ಅಜ್ಜ, ಅಜ್ಜಿಯರೊಂದಿಗೆ ಇದ್ದಾನೆ. ಇದೀಗ ಮತ್ತೆ ಭಾರತಕ್ಕೆ ಬಂದಿದ್ದಾನೆ.

ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋಶೆ ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ್ದರು. ಪ್ರಸ್ತುತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತ ಭೇಟಿಯಲ್ಲಿದ್ದಾರೆ.

ಇದೇ ವೇಳೆ ತನ್ನ ಅಜ್ಜ, ಅಜ್ಜಿಯೊಂದಿಗೆ ಆಗಮಿಸಿದ್ದು, ನಾರಿಮನ್ ಹೌಸ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾನೆ. ಬಾಲಕ ಮೋಶೆ ಪಾಲಿಗೆ ಇದೊಂದು ಭಾವನಾತ್ಮಕ ಕ್ಷಣವಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...