alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು ಹರಿದಾಡ್ತಿತ್ತು ಸುಳ್ಳು ಸುದ್ದಿ

ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹರಿದಾಡ್ತಿವೆ. ನಕಲಿ ವೆಬ್ಸೈಟ್ ಹಾಗೂ ಮೊಬೈಲ್ ಆಪ್ ಗಳು ಸುಳ್ಳು ಮಾಹಿತಿಯನ್ನು ಜನರಿಗೆ ನೀಡ್ತಿವೆ. ಇದ್ರ ವಿರುದ್ಧ ಕಾರ್ಯಾಚರಣೆ ಶುರುವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ದೂರಿನ ಮೇರೆಗೆ ಗೃಹ ಸಚಿವಾಲಯ 89 ವೆಬ್ಸೈಟ್ ಮತ್ತು ಆಪ್ ಗಳ ಮೇಲೆ ನಿರ್ಬಂಧ ವಿಧಿಸಿದೆ.

ಇಂಟರ್ನೆಟ್ ನಲ್ಲಿ ಈ ವೆಬ್ಸೈಟ್ ಗಳ ಲಿಂಕನ್ನು ಡಿಲಿಟ್ ಮಾಡಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ತಪ್ಪು ಸಂದೇಶ ರವಾನೆಯಾಗ್ತಿದೆ. ಇದ್ರ ಬಗ್ಗೆ ಎಚ್ಚರವಾಗಿರಿ ಎಂದು ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶ್ವದ ಅತಿದೊಡ್ಡ ಯೋಜನೆ ಆಯುಷ್ಮಾನ್ ಭಾರತ್ ಶುರುವಾಗ್ತಿದ್ದಂತೆ ಇಂಟರ್ನೆಟ್ ನಲ್ಲಿ ತಪ್ಪು ಮಾಹಿತಿ ರವಾನೆಯಾಗಲು ಶುರುವಾಗಿತ್ತು. ಈ ಬಗ್ಗೆ ಗೃಹ ಸಚಿವಾಲಯಕ್ಕೆ ಲಿಖಿತ ದೂರು ಬಂದಿತ್ತು. ನಂತ್ರ ತನಿಖೆ ಶುರುವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೃಹ ಸಚಿವಾಲಯ 89 ವೆಬ್ಸೈಟ್, ಆಪ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ಮಾಲೀಕರು ಹಾಗೂ ಡೆವಲಪರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಎಲ್ಲ ನಕಲಿ 89 ವೆಬ್ಸೈಟ್ ಗಳು ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದ್ದವು. ಯೋಜನೆ ಲಾಭ ಪಡೆಯಲು ಆಪ್ ನಲ್ಲಿ ಅರ್ಜಿ ಭರ್ತಿ ಮಾಡುವಂತೆ ಸೂಚಿಸುತ್ತಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...