alex Certify
ಕನ್ನಡ ದುನಿಯಾ       Mobile App
       

Kannada Duniya

ಹಸು- ಎಮ್ಮೆಗಳಿಗೂ ಬಂತು ಆಧಾರ್ ಕಾರ್ಡ್

adhaarಭಾರತದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಕಡ್ಡಾಯ ಅನ್ನೋದು ಎಲ್ರಿಗೂ ಗೊತ್ತೇ ಇದೆ. ಇನ್ಮುಂದೆ ಹಸು ಮತ್ತು ಎಮ್ಮೆಗಳಿಗೆ ಕೂಡ ಆಧಾರ್ ಕಾರ್ಡ್ ಸಿಗಲಿದೆ. ಪ್ರತಿಯೊಂದು ಹಸು ಮತ್ತು ಎಮ್ಮೆಗೂ ಯೂನಿಕ್ ಐಡೆಂಟಿಫಿಕೇಶನ್ ನಂಬರ್ ಕೊಡಲಾಗುತ್ತದೆ.

ಹೊಸ ವರ್ಷದಿಂದ್ಲೇ ಸುಮಾರು ಒಂದು ಲಕ್ಷ ತಂತ್ರಜ್ಞರು ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದಕ್ಕಾಗಿ 50,000 ಟ್ಯಾಬ್ಲೆಟ್ ಗಳನ್ನು ಬಳಸಿಕೊಳ್ಳಲಾಗ್ತಿದೆ. ಈ ವರ್ಷ ಒಟ್ಟು 88 ಮಿಲಿಯನ್ ಹಸು ಮತ್ತು ಎಮ್ಮೆಗಳಿಗೆ 12 ಅಂಕಿಗಳ ಯುನಿಕ್ ಐಡೆಂಟಿಫಿಕೇಶನ್ ನಂಬರ್ ವಿತರಿಸಲಾಗುತ್ತದೆ. ಕಾಲಕಾಲಕ್ಕೆ ಅವುಗಳಿಗೆ ವ್ಯಾಕ್ಸಿನೇಶನ್ ಹಾಕುವುದು, ಉತ್ತಮ ತಳಿಗಳ ಅಭಿವೃದ್ಧಿ ಹಾಗೂ ಹೆಚ್ಹೆಚ್ಚು ಹಾಲು ಉತ್ಪಾದಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. 2022 ರ ವೇಳೆಗೆ ಹೈನುಗಾರರ ಆದಾಯವನ್ನು ದುಪ್ಪಟ್ಟು ಮಾಡುವುದು ಅವರ ಗುರಿ.

cow

ಜಾನುವಾರುಗಳ ಕಿವಿಯ ಒಳಗೆ ಟ್ಯಾಗ್ ಅಪ್ಲಿಕೇಟರ್ ಜೊತೆಗೆ ಪಾಲಿಯುರೆಥೇನ್ ಟ್ಯಾಗ್ ಅನ್ನು ಅಳವಡಿಸಲಾಗುತ್ತದೆ. ಇದನ್ನು ಅತ್ಯಂತ ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿದೆ. ಇದು ಕೇವಲ 8 ಗ್ರಾಂ ತೂಕವಿದ್ದು, ಟ್ಯಾಗ್ ಅಳವಡಿಸಲು ವಿಶೇಷ ತರಬೇತಿ ನೀಡಲಾಗಿದೆ. ಟ್ಯಾಗ್ ಫಿಕ್ಸ್ ಮಾಡಿದ ಬಳಿಕ ತಂತ್ರಜ್ಞರು ಆನ್ ಲೈನ್ ಡೇಟಾಬೇಸ್ ನಲ್ಲಿ ನಂಬರ್ ಅಪ್ ಡೇಟ್ ಮಾಡುತ್ತಾರೆ.

ಹಸು ಅಥವಾ ಎಮ್ಮೆಯ ಮಾಲೀಕನಿಗೆ ಯುಐಡಿ ನಂಬರ್ ಉಳ್ಳ ಆನಿಮಲ್ ಹೆಲ್ತ್ ಕಾರ್ಡ್ ನೀಡಲಾಗುತ್ತದೆ. ಅದರಲ್ಲಿ ಹಸುವಿಗೆ ಹಾಕಿಸಬೇಕಾದ ವ್ಯಾಕ್ಸಿನೇಶನ್, ಬ್ರೀಡಿಂಗ್ ಹೀಗೆ ಎಲ್ಲ ಮಾಹಿತಿಯೂ ಲಭ್ಯವಾಗಲಿದೆ. ಉತ್ತರ ಪ್ರದೇಶದಲ್ಲಿ ಪ್ರತಿ ತಿಂಗಳು 14 ಲಕ್ಷ ಜಾನುವಾರುಗಳಿಗೆ ಟ್ಯಾಗ್ ಅಳವಡಿಸಲಾಗುತ್ತದೆ. ಮಧ್ಯಪ್ರದೇಶದಲ್ಲಿ 7.5 ಲಕ್ಷ ಜಾನುವಾರುಗಳಿಗೆ ಯುಐಡಿ ನೀಡಲಾಗುತ್ತದೆ. ಭಾರತದಲ್ಲಿ 41 ಮಿಲಿಯನ್ ಎಮ್ಮೆಗಳು ಹಾಗೂ 47 ಮಿಲಿಯನ್ ಹಸುಗಳಿಂದ ಹಾಲು ಉತ್ಪಾದನೆ ಮಾಡಲಾಗುತ್ತಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...