alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನೆಗೆ 1 ಕೋಟಿ ರೂ. ನೀಡಿದ 84 ವರ್ಷದ ಹಿರಿಜೀವ

msid-58571496width-400resizemode-4cheque

ಸೆಲೆಬ್ರಿಟಿಗಳು, ಉದ್ಯಮಿಗಳು ಲಕ್ಷಾಂತರೆ ರೂಪಾಯಿಯನ್ನು ದಾನ ಮಾಡಿರುವ ಸುದ್ದಿಯನ್ನು ಕೇಳಿರುತ್ತೀರಾ. ಆದ್ರೆ ಸಾಧಾರಣ ವ್ಯಕ್ತಿ, ಅದ್ರಲ್ಲೂ ಕೆಲಸದಿಂದ ನಿವೃತ್ತಿಯಾಗಿರುವ ಹಿರಿಯ ನಾಗರಿಕನೊಬ್ಬ ಲಕ್ಷಾಂತರ ರೂಪಾಯಿ ದಾನ ಮಾಡಿದ್ರೆ ಆಶ್ಚರ್ಯವಾಗೋದು ಸಹಜ.

ಸಾಮಾನ್ಯವಾಗಿ ಜೀವನಪೂರ್ತಿ ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪ ಭಾಗವನ್ನು ಕೊನೆಗಾಲಕ್ಕೆಂದು ಎತ್ತಿಟ್ಟುಕೊಳ್ತೆವೆ. ಆದ್ರೆ ಗುಜರಾತಿನ ನಿವೃತ್ತಿ ಉದ್ಯೋಗಿಯೊಬ್ಬರು ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ. 84 ವರ್ಷದ ಜನಾರ್ಧನ್ ಗುಜರಾತಿನ ಭಾವನನಗರದ ನಿವಾಸಿ. ಎಸ್ ಬಿ ಐ ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಿದ್ದರು. ಭಾರತೀಯ ಸೇನೆ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ರಕ್ಷಣಾ ನಿಧಿಗೆ ಒಂದು ಕೋಟಿ ರೂಪಾಯಿ ದಾನ ಮಾಡಿದ್ದಾರೆ.

ವೃತ್ತಿಯ ವೇಳೆ ಸಾಕಷ್ಟು ಹಣವನ್ನು ಉಳಿತಾಯ ಮಾಡಿದ್ದ ಜನಾರ್ದನ್, ಕೆಲ ಫಂಡ್ ಗಳಿಗೆ ಹಣ ಹಾಕಿದ್ದರು. ಅದ್ರಿಂದ ಸಾಕಷ್ಟು ಹಣ ವಾಪಸ್ ಬಂದಿದೆ. ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಜನಾರ್ದನ್ ಎಲ್ಲರಿಗೂ ಮಾದರಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...