alex Certify
ಕನ್ನಡ ದುನಿಯಾ       Mobile App
       

Kannada Duniya

‘ಗಜ’ ಭಯದಿಂದ ಸುರಕ್ಷಿತ ಸ್ಥಳಕ್ಕೆ 76 ಸಾವಿರ ಜನರ ರವಾನೆ

ಗಜ ಚಂಡಮಾರುತ ಅಪ್ಪಳಿಸುವ ಭಯ ತಮಿಳುನಾಡಿನಲ್ಲಿ ಗಾಬರಿ ಹೆಚ್ಚಿಸಿದ್ದು, ಈಗಾಗಲೇ ಕರಾವಳಿಯ 76 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತ ನಿಧಾನಗತಿಯಲ್ಲಿ ಪಶ್ಚಿಮದಿಕ್ಕಿನತ್ತ ಸರಿಯಲಿದ್ದು, ದುರ್ಬಲಗೊಳ್ಳಬಹುದು ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ತಮಿಳುನಾಡು ಸರ್ಕಾರ 300 ಕ್ಕೂ ಹೆಚ್ಚು ಪರಿಹಾರ ಕೇಂದ್ರ ತೆರೆದು ಅಲ್ಲಿ ಜನರಿಗೆ ಆಶ್ರಯ ಕೊಡಲಾಗಿದೆ. ಆರು ಜಿಲ್ಲೆಗಳಲ್ಲಿ ಈ ರೀತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

120 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಚಂಡಮಾರುತದಿಂದ ಭೂ ಕುಸಿತ ಉಂಟಾಗಬಹುದೆಂಬ ಅಂದಾಜಿದ್ದು, ಈ ಕಾರಣಕ್ಕೆ ಎಚ್ಚರಿಕೆ ವಹಿಸಲಾಗಿದೆ.
ನಾಗಟ್ಟಿಣಂ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿ ಗಮನವಿರಿಸಿದ್ದಾರೆ. ಜತೆಗೆ ತುರ್ತು ಪರಿಸ್ಥಿಯಲ್ಲಿ ಸ್ಪಂದಿಸಲು ದೊಡ್ಡ ತಂಡ ತಯಾರಾಗಿ ಕುಳಿತಿದೆ.

ಎರಡು ನೇವಿ ಬೋಟ್ ಗಳನ್ನು ಕಾಯ್ದಿರಿಸಲಾಗಿದ್ದು, ಹೆಲಿಕ್ಯಾಪ್ಟರ್ ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ದಕ್ಷಿಣ ರೈಲ್ವೆ ಈ ಭಾಗದಲ್ಲಿ ಸಂಚರಿಸುವ ಮೂರು ರೈಲುಗಳನ್ನು ರದ್ದುಪಡಿಸಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ವ್ಯಾಪಾರ ಉದ್ದಿಮೆದಾರರಿಗೆ ಸಿಬ್ಬಂದಿಯನ್ನು ಆದಷ್ಟು ಬೇಗನೇ ದಿನ ಕೆಲಸ ಮುಗಿಸಿ ಕಳಿಸುವಂತೆ ಸೂಚನೆ ನೀಡಲಾಗಿದೆ. ಅಣ್ಣಾ ವಿಶ್ವ ವಿದ್ಯಾಲಯದ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...