alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಎಕ್ಸಾಂ ಬರೆದ ಎಲ್ಲ ಅಭ್ಯರ್ಥಿಗಳೂ ಫೇಲ್…!

ಪಣಜಿ: ಇದು ನಂಬಲು ಸಾಧ್ಯವಿಲ್ಲ ಎನಿಸಿದ್ರೂ ನಂಬಲೇಬೇಕಾದ ಸತ್ಯ ಘಟನೆ. ಅಕೌಂಟೆಂಟ್ ಹುದ್ದೆಗಾಗಿ ರಾಜ್ಯ ಸರ್ಕಾರ ಕರೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳೂ ಫೇಲಾಗಿರುವ ಘಟನೆ ಗೋವಾದಲ್ಲಿ ನಡೆದಿದೆ.

ಹೌದು. 80 ಅಕೌಂಟೆಂಟ್ ಹುದ್ದೆಗಳ ನೇಮಕಾತಿಗಾಗಿ, ಜನವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಿತ್ತು. 8,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ಯಾವೊಬ್ಬ ಅಭ್ಯರ್ಥಿಯೂ ಉತ್ತೀರ್ಣನಾಗಿಲ್ಲ. 100 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಸಂದರ್ಶನ ಸುತ್ತಿಗೆ ಆಯ್ಕೆಯಾಗಲು ಪರೀಕ್ಷೆಯಲ್ಲಿ 50 ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕಿತ್ತು. ಆದರೆ ಯಾವೊಬ್ಬ ಅಭ್ಯರ್ಥಿಯೂ ಕನಿಷ್ಠ ಅಂಕಗಳನ್ನು ಕೂಡ ಪಡೆದಿಲ್ಲ ಎಂಬುದು ವಿಪರ್ಯಾಸ.

ಇದು ಗೋವಾ ವಿಶ್ವವಿದ್ಯಾಲಯ ಹಾಗೂ ಕಾಮರ್ಸ್ ಕಾಲೇಜುಗಳ ಶಿಕ್ಷಣ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದ್ದು, ರಾಜ್ಯದ ಶೈಕ್ಷಣಿಕ ವ್ಯವಸ್ಥೆಯೇ ತಲೆತಗ್ಗಿಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...