alex Certify
ಕನ್ನಡ ದುನಿಯಾ       Mobile App
       

Kannada Duniya

ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಪ್ರವಾಸಿಗರು…!

ಆಂಧ್ರಪ್ರದೇಶದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. 80 ಮಂದಿ ಪ್ರವಾಸಿಗರಿದ್ದ ಬೋಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮಕ್ಕಳು, ವೃದ್ಧರು ಆದಿಯಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಸಿದ್ಧ ಪ್ರವಾಸಿ ಸ್ಥಳವಾದ ಪಪಿಕೋಂಡಲುಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಎರಡು ಬೆಟ್ಟಗಳ ನಡುವಿನ ಕಿರಿದಾದ ಹಾದಿಯಲ್ಲಿ ಇಲ್ಲಿಗೆ ಸಾಗಬೇಕು. ಬೆಳಗ್ಗೆ ರಾಜಮಂಡ್ರಿಯಿಂದ ಹೊರಟ ಪ್ರವಾಸಿಗರು, ಹತ್ತಿರದ ಯಾತ್ರಾಸ್ಥಳಗಳನ್ನು ನೋಡುತ್ತಾ ಹೋಗುತ್ತಿದ್ದರು. ಉಪಹಾರಕ್ಕಾಗಿ ಸ್ವಲ್ಪ ಸಮಯ ದೋಣಿಯನ್ನು ನಿಲ್ಲಿಸಲಾಗಿತ್ತು. ನಂತರ ಬೋಟ್ ಚಲಿಸಲು ಆರಂಭಿಸುತ್ತಿದ್ದಂತೆ ಹೊಗೆ ಬರಲು ಶುರುವಾಯ್ತು. ಇದನ್ನು ಗಮನಿಸಿದ ಪ್ರವಾಸಿಗರೊಬ್ಬರು ತಕ್ಷಣವೇ ಸಿಬ್ಬಂದಿಗೆ ತಿಳಿಸಿದ್ದಾರೆ. ಇದಾಗಿ ಕೆಲ ಕ್ಷಣದಲ್ಲೇ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲಾರಂಭಿಸಿತು.

ತಕ್ಷಣವೇ ಎಚ್ಚೆತ್ತ ಡ್ರೈವರ್, ಬೋಟನ್ನು ಅಲ್ಲಿಯೇ ಇದ್ದ ಸಣ್ಣ ದ್ವೀಪದ ಹತ್ತಿರ ತಂದು ನಿಲ್ಲಿಸಿದ. ಅಷ್ಟರಲ್ಲಾಗಲೆ ಕೆಲ ಪ್ರಯಾಣಿಕರು ನೀರಿಗೆ ಜಿಗಿದು, ಈಜಿ ದಡ ಸೇರುತ್ತಿದ್ದರು. ಇನ್ನುಳಿದ ಪ್ರಯಾಣಿಕರನ್ನು ಸಿಬ್ಬಂದಿ ಸುರಕ್ಷಿತವಾಗಿ ದಡ ಮುಟ್ಟಿಸಿದರು. ಇದಾಗಿ ಕೆಲ ನಿಮಿಷಗಳಲ್ಲೇ ಬೋಟ್ ಸಂಪೂರ್ಣವಾಗಿ ಸುಟ್ಟು ಹೋಯ್ತು. ಸುದ್ದಿ ತಿಳಿದ ಪೊಲೀಸರು ತಕ್ಷಣವೇ ಬೇರೆ ದೋಣಿಗಳಲ್ಲಿ ಪ್ರಯಾಣಿಕರನ್ನು ದ್ವೀಪದಿಂದ ಕರೆತಂದ್ರು.

ಘಟನೆ ಸಂಬಂಧ ಆಂಧ್ರಪ್ರದೇಶ ಸಿಎಂ ಚಂದ್ರುಬಾಬು ನಾಯ್ಡು ಪ್ರತಿಕ್ರಿಯಿಸಿದ್ದು, ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲದೆ ಘಟನೆಯ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಬೋಟ್ ನ ಅಡುಗೆ ಕೋಣೆಯಲ್ಲಿದ್ದ ಸ್ಟೌವ್ ನಿಂದ ಬೆಂಕಿ ಹಬ್ಬಿ ಅದು ಇಡೀ ದೋಣಿಯನ್ನು ಆವರಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...