alex Certify
ಕನ್ನಡ ದುನಿಯಾ       Mobile App
       

Kannada Duniya

‘ಎಲ್.ಕೆ. ಅಡ್ವಾಣಿ ರಾಷ್ಟ್ರಪತಿಯಾಗಬೇಕಿತ್ತು, ಆದರೆ….’

ನವದೆಹಲಿ: ಬಿ.ಜೆ.ಪಿ. ಯ ಶೇ. 80 ರಷ್ಟು ಮಂದಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ರಾಷ್ಟ್ರಪತಿಯಾಗಬೇಕೆಂದು ಬಯಸಿದ್ದರು ಎಂದು ಪಕ್ಷದ ನಾಯಕ, ಸಂಸದ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಒತ್ತಾಯಿಸಿದ್ದ ಬಣದಲ್ಲಿ ಶತ್ರುಘ್ನ ಸಿನ್ಹಾ ಗುರುತಿಸಿಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಬಿ.ಜೆ.ಪಿ.ಯನ್ನು ಅವರು ಯಶಸ್ವಿಯಾಗಿ ಮುನ್ನಡೆಸಿದರು.

ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಮಾತನಾಡಿರುವ ಶತ್ರುಘ್ನ ಸಿನ್ಹಾ, ಬಿ.ಜೆ.ಪಿ.ಯ ಶೇ. 80 ರಷ್ಟು ಮಂದಿ ಅಡ್ವಾಣಿ ರಾಷ್ಟ್ರಪತಿ ಆಗಲೆಂದು ಬಯಸಿದ್ದರು. ಆದರೆ, ನಾವಂದುಕೊಂಡಂತೆ ಏನೂ ಆಗಲಿಲ್ಲ ಎಂದು ತಿಳಿಸಿದ್ದಾರೆ.

ಶತ್ರುಘ್ನ ಸಿನ್ಹಾ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಹಲವು ಸಲ ಅಸಮಾಧಾನದ ಹೊರ ಹಾಕಿದ್ದಾರೆ. ಈಗ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಮಾತನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...