alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯ ಮೆಟ್ರೋ ನಿಲ್ದಾಣದಲ್ಲೊಂದು ಅಮಾನವೀಯ ಘಟನೆ

ದೆಹಲಿಯ ಮೆಟ್ರೋ ನಿಲ್ದಾಣದ ಬಳಿ 8 ವರ್ಷದ ಬಾಲಕಿಯೊಬ್ಬಳನ್ನು ಸರಪಳಿಯಿಂದ ಮರಕ್ಕೆ ಬಂಧಿಸಿಡಲಾಗಿತ್ತು. ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತಿದ್ದ ಇಬ್ಬರು ಅಪ್ರಾಪ್ತರನ್ನು ರಕ್ಷಣೆ ಮಾಡಲು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥರು ಅಲ್ಲಿಗೆ ತೆರಳಿದ್ದರು. ಈ ವೇಳೆ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಹಾಕಿರೋದನ್ನು ಗಮನಿಸಿದ್ದಾರೆ.

ಕೊನೆಗೆ ಆಯೋಗದ ಅಧ್ಯಕ್ಷೆ ಸ್ವಾತಿ, ಬಾಲಕಿಯ ಮನೆಗೆ ತೆರಳಿ ವಿಚಾರಿಸಿದ್ದಾನೆ. ಮೆಟ್ರೋ ಸ್ಟೇಶನ್ ಬಳಿಯಿರೋ ಫುಟ್ಪಾತ್ ನಲ್ಲೇ ಅವರ ವಾಸ. ಒಟ್ಟು 11 ಜನರ ದೊಡ್ಡ ಕುಟುಂಬ. ಬಾಲಕಿಯ ತಾಯಿ ಗರ್ಭಿಣಿ, ತಂದೆ ಕುಡುಕ. ಬಾಲಕಿಗೆ ಅದ್ಹೇಗೋ ಡ್ರಗ್ಸ್ ಚಟ ಅಂಟಿಕೊಂಡಿದೆ.

ಹಾಗಾಗಿ ಸಹೋದರಿಯೇ ಅವಳನ್ನು ಮರಕ್ಕೆ ಕಟ್ಟಿಹಾಕಿದ್ಲು. ಆಕೆ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಮಹಿಳಾ ಆಯೋಗದ ಅಧ್ಯಕ್ಷೆ ಇಬ್ಬರನ್ನೂ ಅಲ್ಲಿಂದ ರಕ್ಷಿಸಿ ಮಕ್ಕಳ ಕ್ಷೇಮಾಭಿವೃದ್ಧಿ ವಶಕ್ಕೆ ಒಪ್ಪಿಸಿದ್ದಾರೆ. ಬಾಲಕಿಯರಿಗೆ ಸಹಾಯ ಮಾಡುವಂತೆ ಸಾರ್ವಜನಿಕರಲ್ಲೂ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...