alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಶಿಕ್ಷಕನಿಂದಲೇ ನಡೆದಿದೆ ಘೋರ ಕೃತ್ಯ

ಮಹಾರಾಷ್ಟ್ರದ ಪಿಂಪಲ್ಗಾಂವ್ ನಲ್ಲಿ ಶಿಕ್ಷಕರೊಬ್ಬರು ಗಣಿತ ಸರಿಯಾಗಿ ಮಾಡದ 8 ವರ್ಷದ ವಿದ್ಯಾರ್ಥಿಗೆ ಅಮಾನವೀಯ ಶಿಕ್ಷೆ ನೀಡಿದ್ದಾರೆ. ಮರದ ಸ್ಕೇಲ್ ನಿಂದ ಬಾಲಕನ ಕತ್ತಿಗೇ ಗಾಯ ಮಾಡಿದ್ದಾರೆ.

ಇದರಿಂದಾಗಿ ಬಾಲಕನ ಅನ್ನನಾಳ ಮತ್ತು ಶ್ವಾಸಕೋಶಕ್ಕೆ ಹಾನಿಯಾಗಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಗಣಿತ ಸರಿಯಾಗಿ ಮಾಡದ ವಿದ್ಯಾರ್ಥಿ ಮೇಲೆ ಸಿಟ್ಟಿಗೆದ್ದ ಶಿಕ್ಷಕ, ಮರದ ಸ್ಕೇಲ್ ನಿಂದ ಕುತ್ತಿಗೆಗೆ ಇರಿದಿದ್ದಾರೆ.

ಇದರಿಂದ ಕುತ್ತಿಗೆಗೆ ದೊಡ್ಡ ಗಾಯವಾಗಿ ರಕ್ತ ಸುರಿಯಲಾರಂಭಿಸಿತ್ತು. ಬಾಲಕ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದ. ಉಳಿದ ಮಕ್ಕಳ ಗಲಾಟೆ ಕೇಳಿ ತರಗತಿಗೆ ಬಂದ ಮುಖ್ಯ ಶಿಕ್ಷಕರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕಳಿಸಿಕೊಟ್ಟಿದ್ರು.

ಆದ್ರೆ ಆತನ ಸ್ಥಿತಿ ಗಂಭೀರವಾಗಿದ್ದಿದ್ದರಿಂದ ಪುಣೆಗೆ ಕರೆದೊಯ್ಯಲಾಯ್ತು. ಸದ್ಯ ಬಾಲಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ದಾಖಲಾಗಿದ್ದು, ಆರೋಪಿ ಶಿಕ್ಷಕನನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...