alex Certify
ಕನ್ನಡ ದುನಿಯಾ       Mobile App
       

Kannada Duniya

ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಮಹತ್ವದ ಸುದ್ದಿ

ಬೇಡಿಕೆಗಳು ಈಡೇರದ ಬೇಸರದಲ್ಲಿರುವ ಕೇಂದ್ರ ಸರ್ಕಾರಿ ನೌಕರರ ಮುಖದಲ್ಲಿ ನಗು ಮೂಡಿಸುವಂಥ ವಿಷಯವೊಂದು ಹೊರಬಿದ್ದಿದೆ. ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿಂತನೆಯಲ್ಲಿದ್ದು, 7ನೇ ವೇತನ ಆಯೋಗದ ಶಿಫಾರಸಿಗೂ ಮೀರಿ ಪ್ರಯೋಜನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರ 50 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರಿಗೆ ಯೋಗ್ಯತಾನುಸಾರ ವೇತನ ಹೆಚ್ಚಳದ ಬಗ್ಗೆ ಚಿಂತನೆಯಲ್ಲಿದ್ದರೂ ಇದು ಸದ್ಯದಲ್ಲಿ ಜಾರಿಯಾಗುವ ಲಕ್ಷಣಗಳಿಲ್ಲ. ಬಹುಶಃ ಹೊಸ ವರ್ಷಕ್ಕೆ ಎಂದರೆ ಮುಂದಿನ ಗಣರಾಜ್ಯೋತ್ಸವ ಸಂದರ್ಭದಲ್ಲಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18 ಸಾವಿರ ರೂಪಾಯಿಗಳಿಷ್ಟಿದ್ದು, ಅದನ್ನು 26 ಸಾವಿರಕ್ಕೆ ಹೆಚ್ಚಿಸುವಂತೆ ಬಹಳ ದಿನಗಳಿಂದ ನೌಕರರು ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆದರೆ ಸದ್ಯದ ಮಾಹಿತಿ ಪ್ರಕಾರ 8 ಸಾವಿರದ ಬದಲು 2 ಸಾವಿರದಷ್ಟು ಏರಿಕೆ ಕೊಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಯಾವುದಕ್ಕೂ ಜನವರಿವರೆಗೆ ಕಾಯಲೇಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...