alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ಏರಿಕೆಯಾಯ್ತು ತುಟ್ಟಿ ಭತ್ಯೆ

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಏರಿಕೆ ಮಾಡಿದೆ. ತುಟ್ಟಿ ಭತ್ಯೆ ಶೇಕಡಾ 2 ರಷ್ಟು ಏರಿಕೆಯಾಗಿದೆ. ಶೇಕಡಾ 7 ರಷ್ಟಿದ್ದ ತುಟ್ಟಿಭತ್ಯೆ ಈಗ ಶೇಕಡಾ 9 ಕ್ಕೆ ಏರಿಕೆಯಾದಂತಾಗಿದೆ.

ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಶೇಕಡಾ 2ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿತ್ತು. ಶೇಕಡಾ 5 ರಷ್ಟಿದ್ದ ತುಟ್ಟಿ ಭತ್ಯೆ ಮಾರ್ಚ್ ನಂತ್ರ ಶೇಕಡಾ 7 ರಷ್ಟಾಗಿತ್ತು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಸರ್ಕಾರ ಈ ಸುದ್ದಿ ಹೇಳ್ತಿದ್ದಂತೆ ಸರ್ಕಾರಿ ಕಚೇರಿಗಳಲ್ಲಿ ಲೆಕ್ಕಾಚಾರ ಶುರುವಾಗಿದೆ.

ಒಂದು ಎಣಿಕೆ ಪ್ರಕಾರ 7ನೇ ವೇತನ ಆಯೋಗದಡಿ ಮೂಲ ಸಂಬಳ 18 ಸಾವಿರ ಇರುವ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ರೂಪದಲ್ಲಿ ಪ್ರತಿ ತಿಂಗಳು ಇನ್ಮುಂದೆ 1620 ರೂಪಾಯಿ ಸಿಗಲಿದೆ. ಜುಲೈ 1,2018 ರಿಂದಲೇ ಹೊಸ ಭತ್ಯೆ ಜಾರಿಯಾಗಿದೆ. 1.1 ಕೋಟಿ ನೌಕರರು ಹಾಗೂ ನಿವೃತ್ತ ಸಿಬ್ಬಂದಿ ಇದ್ರ ಲಾಭ ಪಡೆಯಲಿದ್ದಾರೆ. ಆಗಸ್ಟ್ ಸಂಬಳದ ಜೊತೆ ಹೊಸ ತುಟ್ಟಿ ಭತ್ಯೆ ನೌಕರರ ಕೈ ಸೇರುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...