alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ನೌಕರರಿಗೆ ಖುಷಿ ಸುದ್ದಿ: ಏರಿಕೆಯಾಗಲಿದೆ ವೇತನ

ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗೆ ಕಾಯ್ತಿದ್ದಾರೆ. ಮುಂದಿನ ತಿಂಗಳು 7ನೇ ವೇತನ ಆಯೋಗ ಜಾರಿಗೆ ಬರುವ ಸಾಧ್ಯತೆಯಿದೆ. ಸರ್ಕಾರ ತಮ್ಮ ಬೇಡಿಕೆ ಸ್ವೀಕರಿಸಿ ದೊಡ್ಡ ಮೊತ್ತದಲ್ಲಿ ವೇತನ ಹೆಚ್ಚಳ ಮಾಡಲಿದೆ ಎಂಬ ಭರವಸೆಯಲ್ಲಿ ಉದ್ಯೋಗಿಗಳಿದ್ದಾರೆ. ಆದ್ರೆ ವೇತನ ಎಷ್ಟು ಹೆಚ್ಚಳವಾಗಬಹುದೆಂಬ ಪ್ರಶ್ನೆಗೆ ಸರಿಯಾಗಿ ಉತ್ತರ ಸಿಕ್ಕಿಲ್ಲ.

ಮೂಲಗಳ ಪ್ರಕಾರ, ಸರ್ಕಾರ ನೌಕರರ ಬೇಡಿಕೆಗೆ ಸ್ಪಂದಿಸಿ 8 ಸಾವಿರ ರೂಪಾಯಿ ವೇತನ ಹೆಚ್ಚಿಸಿ ಸಿಹಿ ಸುದ್ದಿ ನೀಡುವ ಸಾಧ್ಯತೆಯಿದೆ. ಮೋದಿ ಸರ್ಕಾರ ನೌಕರರ ಕನಿಷ್ಠ ವೇತನವನ್ನು 18 ಸಾವಿರದಿಂದ 26 ಸಾವಿರಕ್ಕೆ ಏರಿಕೆ ಮಾಡಲಿದೆಯಂತೆ. ಕಳೆದ ಕೆಲ ದಿನಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಆಗಸ್ಟ್ 15 ರಂದು ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ನೀಡುವ ಸಾಧ್ಯತೆ ದಟ್ಟವಾಗಿದೆ.

ಮುಚ್ಚಿದ ಕೋಣೆಯಲ್ಲಿ ಮೋದಿ ನೇತೃತ್ವದಲ್ಲಿ ಮಹತ್ವದ ಚರ್ಚೆ ನಡೆದಿದೆಯಂತೆ. 7ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನವನ್ನು 18 ಸಾವಿರಕ್ಕೆ ಏರಿಕೆ ಮಾಡುವಂತೆ ಹೇಳಲಾಗಿದೆ. ಆದ್ರೆ ಸರ್ಕಾರ  ಬೇಡಿಕೆಯಂತೆ 26 ಸಾವಿರ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...