alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರಿ ನೌಕರರಿಗೊಂದು ಬ್ಯಾಡ್ ನ್ಯೂಸ್

ಕೇಂದ್ರ ಸರ್ಕಾರಿ ನೌಕರರಿಗೆ ತೀವ್ರ ನಿರಾಸೆಯ ಸುದ್ದಿಯೊಂದು ಕಾದಿದೆ. ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ ಸರ್ಕಾರಿ ನೌಕರರ ಕನಿಷ್ಠ ವೇತನದಲ್ಲಿ ಸರ್ಕಾರ ಹೆಚ್ಚಳ ಮಾಡುತ್ತಿಲ್ಲ ಎನ್ನಲಾಗ್ತಿದೆ. 18,000 ರೂಪಾಯಿ ಇರೋ ಕನಿಷ್ಠ ವೇತನವನ್ನು 26,000ಕ್ಕೆ ಏರಿಕೆ ಮಾಡಬೇಕೆಂದು ನೌಕರರು ಒತ್ತಾಯಿಸಿದ್ರು.

ನೌಕರರು ಪ್ರತಿಭಟನೆಗಿಳಿಯಬಹುದು ಅನ್ನೋ ಕಾರಣಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ, ಉನ್ನತ ಮಟ್ಟದ ಸಮಿತಿ ರಚಿಸಿ ಕನಿಷ್ಠ ವೇತನ ಹೆಚ್ಚಳ ಮಾಡುವ ಭರವಸೆ ನೀಡಿದ್ದರು. ಆದ್ರೀಗ ಕೇಂದ್ರ ಸರ್ಕಾರ ನೌಕರರ ಬೇಡಿಕೆಯನ್ನು ತಿರಸ್ಕರಿಸಿದೆ ಅಂತಾ ಹೇಳಲಾಗ್ತಿದೆ.

7ನೇ ವೇತನ ಆಯೋಗ ಕೂಡ ಕನಿಷ್ಠ ವೇತನ ಏರಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಎಪ್ರಿಲ್ 2018ರಿಂದ ವೇತನ ಪರಿಷ್ಕರಣೆ ಜಾರಿಗೆ ಬರಲಿದೆ ಅಂತಾನೇ ಹೇಳಲಾಗಿತ್ತು. ಆದ್ರೆ ಕೇಂದ್ರ ಸಚಿವ ಸಂಪುಟ ಇದಕ್ಕೆ ಸಮ್ಮತಿಸುವ ಸಾಧ್ಯತೆಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...