alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರರಿಗೆ ಮತ್ತೊಂದು ಉಡುಗೊರೆ ನೀಡಲು ಸಿದ್ಧವಾಗಿದೆ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಶೀಘ್ರವೇ 7ನೇ ವೇತನ ಆಯೋಗ ಜಾರಿಗೆ ತಂದು ಕೇಂದ್ರ ಸರ್ಕಾರಿ ನೌಕರರನ್ನು ಖುಷಿಗೊಳಿಸುವ ಸಾಧ್ಯತೆಯಿದೆ. ಎಲ್ಲ ಸರಿಯಾಗಿದ್ದರೆ ಕೇಂದ್ರ ಸರ್ಕಾರ, ನೌಕರರಿಗೆ ಹೊಸ ಉಡುಗೊರೆ ನೀಡುವ ಸಾಧ್ಯತೆಯಿದೆ. ಏಳನೇ ವೇತನ ಆಯೋಗದ ಶಿಫಾರಸ್ಸಿನ ಬಗ್ಗೆ ಕೇಂದ್ರ ಸರ್ಕಾರ ಈವರೆಗೂ ಯಾವುದೇ ನಿರ್ಧಾರ ಹೊರಡಿಸಿಲ್ಲ. ಆದ್ರೆ ಇನ್ನೊಂದು ವಿಧಾನದಲ್ಲಿ ಕೇಂದ್ರ ನೌಕರರನ್ನು ಖುಷಿಗೊಳಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಕೇಂದ್ರ ಸರ್ಕಾರ, ಪ್ರಯಾಣ ರಿಯಾಯಿತಿ (ಎಲ್ಟಿಸಿ) ಅಡಿಯಲ್ಲಿ ನೌಕರರಿಗೆ ವಿದೇಶಕ್ಕೆ ತೆರಳಲು ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಕೆಲ ಹಿರಿಯ ಅಧಿಕಾರಿಗಳ ಪ್ರಕಾರ, ಕೇಂದ್ರ ಸರ್ಕಾರ ಎಲ್ಟಿಸಿ ಅಡಿಯಲ್ಲಿ ನೌಕರರಿಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಲಿದೆಯಂತೆ. ಈ ನಿಟ್ಟಿನ ಒಂದು ಪ್ರಸ್ತಾಪಕ್ಕೆ ಕಾರ್ಮಿಕ ಸಚಿವಾಲಯ ಅಂತಿಮ ರೂಪ ನೀಡಿದೆ.

ಕಾರ್ಮಿಕ ಸಚಿವಾಲಯ, ಗೃಹ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ಸೇರಿದಂತೆ ಅನೇಕ ಸಚಿವಾಲಯಗಳಿಂದ ಈ ಬಗ್ಗೆ ಸಲಹೆ ಕೇಳಲಿದೆ. ಎಲ್ಟಿಸಿ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ ರಜೆ ಜೊತೆ ಟಿಕೆಟ್ ದರ ವಾಪಸ್ ಸಿಗಲಿದೆ. ಹೊಸ ಯೋಜನೆ ಜಾರಿಗೆ ಬಂದ್ರೆ ವಿದೇಶಿ ಪ್ರವಾಸಕ್ಕೆ ಹೋಗುವ ನೌಕರರ ಟಿಕೆಟ್ ಹಣವನ್ನು ಕೂಡ ಸರ್ಕಾರ ನೀಡಲಿದೆ. ಆದ್ರೆ ಇದು ನೌಕರರಿಗೆ ಇಷ್ಟವಾಗುವ ಸಾಧ್ಯತೆ ಕಡಿಮೆಯಿದೆ. ವೇತನ ಹೆಚ್ಚಳ ಮಾಡಿ ಎಂಬ ಬೇಡಿಕೆ ಹೆಚ್ಚಾಗಿದೆ. ಶೀಘ್ರದಲ್ಲಿಯೇ ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...