alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರಿ ನೌಕರರ ವೇತನ ಏರಿಕೆಯಾಗೋದು ಯಾವಾಗ ಗೊತ್ತಾ?

ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಯಾಗುವ ಖುಷಿ ಸುದ್ದಿ ದೀಪಾವಳಿ ವೇಳೆಗೆ ಸಿಗುವ ಸಾಧ್ಯತೆಯಿದೆ. ನವೆಂಬರ್ 2018 ರಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಖುಷಿ ಸುದ್ದಿ ನೀಡುವ ನಿರೀಕ್ಷೆಯಿದೆ. ಈ ಹಿಂದೆ ಆಗಸ್ಟ್ 15,2018 ರಂದು ಮೋದಿ ಸರ್ಕಾರ ಖುಷಿ ಸುದ್ದಿ ನೀಡಲಿದೆ ಎನ್ನಲಾಗ್ತಾಯಿತ್ತು. ಆದ್ರೆ ನಿನ್ನೆ ನಡೆದ ಸರ್ಕಾರಿ ಅಧಿಕಾರಿಗಳು ಹಾಗೂ ಎನ್ ಎ ಸಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆಯಂತೆ.

ಸಭೆಯಲ್ಲಿ ಅನೇಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಎಷ್ಟು ಹೆಚ್ಚಿಸಬೇಕು? ಯಾವ ಮಾಪನದಲ್ಲಿ ಹೆಚ್ಚಳ ಮಾಡಬೇಕು ಎಂಬೆಲ್ಲ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಆರ್ಥಿಕ ಸಲಹೆಗಾರರ ಜೊತೆ ಸಮಾಲೋಚನೆ ನಡೆಯಲಿದೆಯಂತೆ.

ಹಣಕಾಸು ಸಲಹೆಗಾರರ ಸಲಹೆ ಪಡೆದ ನಂತ್ರ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರಿ ನೌಕರರ ಮೂಲ ವೇತನ ಹೆಚ್ಚಳದಿಂದ ಸರ್ಕಾರಕ್ಕೆ ಎಷ್ಟು ಲಾಭ-ಎಷ್ಟು ನಷ್ಟ ಎಂಬ ಪ್ರಶ್ನೆಗೆ ಕೇಂದ್ರ ಉತ್ತರ ಪಡೆಯಲಿದೆ. 2019ರ ಲೋಕಸಭೆ ಚುನಾವಣೆಗೂ ಮುನ್ನ ವೇತನ ಹೆಚ್ಚಳದ ಘೋಷಣೆ ಮಾಡಿ ನೌಕರರನ್ನು ಮೋದಿ ಸರ್ಕಾರ ಖುಷಿ ಪಡಿಸಲಿದೆ. ಈ ಮೂಲಕ ಸರ್ಕಾರಿ ನೌಕರರ ಮತ  ಸೆಳೆಯುವ ಯತ್ನ ಮಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...