alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳೇ ಬೇಕು ಎನ್ನುತ್ತಿರೋ ಭಾರತೀಯರು ಎಷ್ಟಿದ್ದಾರೆ ಗೊತ್ತಾ?

ಹೆಣ್ಣು ಭ್ರೂಣ ಹತ್ಯೆ ಇನ್ನೂ ನಿಂತಿಲ್ಲ. ಆದ್ರೂ ಹೆಣ್ಣು ಸಮಾಜದ ಕಣ್ಣು ಅನ್ನೋದನ್ನು ಜನರು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಯಾಕಂದ್ರೆ 15 ರಿಂದ 49 ವರ್ಷದೊಳಗಿನ ಶೇ.79 ರಷ್ಟು ಮಹಿಳೆಯರು ಹಾಗೂ 15 ರಿಂದ 54 ವರ್ಷದೊಳಗಿನ ಶೇ.78ರಷ್ಟು ಪುರುಷರು, ಮನೆಗೆ ಒಂದಾದ್ರೂ  ಹೆಣ್ಣು ಮಗು ಬೇಕು ಎಂಬ ಭಾವನೆ ಹೊಂದಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಅಂಕಿ ಅಂಶ ಬಹಿರಂಗವಾಗಿದೆ. ಹಿಂದುಳಿದ ಜಾತಿ, ಹಿಂದುಳಿದ ವರ್ಗ, ಬುಡಕಟ್ಟು ಜನಾಂಗ, ಮುಸ್ಲಿಂ, ಗ್ರಾಮೀಣ ಭಾಗದವರು, ಬಡವರು ಹೀಗೆ ಸಮಾಜದ ಎಲ್ಲಾ ವರ್ಗಗಳ ಪುರುಷ ಮತ್ತು ಮಹಿಳೆಯರು ಹೆಣ್ಣು ಮಗುವನ್ನು ಹೊಂದಲು ಆಸಕ್ತಿ ತೋರಿಸುತ್ತಿದ್ದಾರೆ.

2005-06ರಲ್ಲಿ ಶೇ.74ರಷ್ಟು ಮಹಿಳೆಯರು ಹಾಗೂ ಶೇ.65ರಷ್ಟು ಪುರುಷರು ಒಂದಾದ್ರೂ ಹೆಣ್ಣು ಮಗು ಬೇಕೆಂಬ ಅಭಿಪ್ರಾಯ ಹೊಂದಿದ್ದರು. ಈಗ ಆ ಪ್ರಮಾಣ ಏರಿಕೆಯಾಗಿದೆ. ಗ್ರಾಮೀಣ ಭಾಗದ ಪುರುಷರಲ್ಲೇ ಹೆಣ್ಣು ಮಗುವನ್ನು ಹೊಂದಬೇಕೆಂಬ ಇಚ್ಛೆ ಹೆಚ್ಚಾಗಿದೆ.

ಯಾಕಂದ್ರೆ ಗ್ರಾಮೀಣ ಭಾಗದ ಶೇ.80ರಷ್ಟು ಪುರುಷರು ಹಾಗೂ ನಗರ ಪ್ರದೇಶದ ಶೇ.75ರಷ್ಟು ಪುರುಷರು ಹೆಣ್ಣುಮಗುವನ್ನು ಹೊಂದಲು ಇಚ್ಛಿಸಿದ್ದಾರೆ. ಸುಶಿಕ್ಷಿತರಿಗಿಂತ್ಲೂ ಹೆಚ್ಚಾಗಿ ಅನಕ್ಷರಸ್ಥರಲ್ಲೇ ಹೆಣ್ಣು ಮಗುವನ್ನು ಹೊಂದಬೇಕೆಂಬ ಬಯಕೆ ಇದೆ.

ಎಲ್ಲಾ ವರ್ಗಗಳ ಶೇ.82ರಷ್ಟು ಮಹಿಳೆಯರು ಹಾಗೂ ಶೇ.83ರಷ್ಟು ಪುರುಷರು ಮನೆಯಲ್ಲಿ ಕನಿಷ್ಟ ಒಂದು ಗಂಡು ಮಗು ಇರಬೇಕು ಎಂಬ ಭಾವನೆ ಹೊಂದಿದ್ದಾರೆ. ಶೇ.19ರಷ್ಟು ಮಂದಿ ಹೆಣ್ಣುಮಕ್ಕಳಿಗಿಂತ ಹೆಚ್ಚಾಗಿ ಗಂಡು ಮಗುವನ್ನೇ ಬಯಸಿದ್ದಾರೆ. ಶೇ.3.7ರಷ್ಟು ಪುರುಷ ಮಹಿಳೆಯರು ಗಂಡಿಗಿಂತ ಹೆಚ್ಚಾಗಿ ಹೆಣ್ಣು ಮಗುವೇ ಬೇಕೆನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...