alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಣಿಕ್ ಚಂದ್ ಗುಟ್ಕಾ ಉದ್ಯಮಿಯನ್ನೂ ಬಿಡಲಿಲ್ಲ ಕ್ಯಾನ್ಸರ್

ಗುಟ್ಕಾ ಉದ್ಯಮಿ ಹಾಗೂ ಮಾಣಿಕ್ ಚಂದ್ ಗ್ರೂಪ್ ಆಫ್ ಕಂಪನೀಸ್ ಮಾಲೀಕ ರಸಿಕ್ ಲಾಲ್ ಧರಿವಾಲ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಪತ್ನಿ, ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ರಸಿಕ್ ಲಾಲ್ ಗೆ ಪರೋಟಿಡ್ ಗ್ರಂಥಿಯ ಕ್ಯಾನ್ಸರ್ ಇತ್ತು.

ಕ್ಯಾನ್ಸರ್ ದೇಹದ ತುಂಬಾ ಪಸರಿಸಿದ್ದರಿಂದ ಚಿಕಿತ್ಸೆ ಕೂಡ ಫಲಕಾರಿಯಾಗಿರಲಿಲ್ಲ. ಬಹು ಅಂಗಾಂಗ ವೈಫಲ್ಯದಿಂದ ರಸಿಕ್ ಲಾಲ್ ಕೊನೆಯುಸಿರೆಳೆದಿದ್ದಾರೆ. ರಸಿಕ್ ಲಾಲ್ ತಂದೆ ಬೀಡಿ ವ್ಯಾಪಾರಿಯಾಗಿದ್ದರು. ಆರಂಭದಲ್ಲಿ ರಸಿಕ್ ಲಾಲ್ ಕೂಡ ಬೀಡಿ ಉದ್ಯಮವನ್ನೇ ನಡೆಸುತ್ತಿದ್ರು.

ನಂತರ ಗುಟ್ಕಾ ಉತ್ಪಾದನೆ ಆರಂಭಿಸಿದ್ರು. ರಸಿಕ್ ಲಾಲ್ ಅವರ ಮಾಣಿಕ್ ಚಂದ್ ಗುಟ್ಕಾ ಬಹಳ ಜನಪ್ರಿಯವಾಗಿತ್ತು. ಅವರು ಭಾರತದ ಅತಿದೊಡ್ಡ ತಂಬಾಕು ಉತ್ಪಾದಕರಲ್ಲಿ ಒಬ್ಬರು ಎನಿಸಿಕೊಂಡಿದ್ದರು. ಆದ್ರೆ ತಂಬಾಕು ಉದ್ಯಮಿಯೇ ಕ್ಯಾನ್ಸರ್ ಗೆ ಬಲಿಯಾಗಿರೋದು ಅದರ ಅಪಾಯಕ್ಕೆ ಸಾಕ್ಷಿ ಎಂಬಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...