alex Certify
ಕನ್ನಡ ದುನಿಯಾ       Mobile App
       

Kannada Duniya

777888999 ನಂಬರ್ ನಿಂದ ಬರುವ ಕರೆ ಸಾವು ತರಲ್ಲ ಡೋಂಟ್ ವರಿ

777888999_1495018149_749x421

777888999 ನಂಬರ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಈ ನಂಬರ್ ಬಗ್ಗೆ ಸಿಕ್ಕಾಪಟ್ಟೆ ವದಂತಿಗಳು ಕೇಳಿ ಬರ್ತಾ ಇವೆ. ವಾಟ್ಸ್ ಅಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ನಂಬರ್ ಬಗ್ಗೆ ಎಚ್ಚರಿಕೆಯ ಸಂದೇಶ ರವಾನೆಯಾಗ್ತಾ ಇದೆ.

777888999 ನಂಬರ್ ನಲ್ಲಿ ವೈರಸ್ ಇದೆ. ಹಾಗಾಗಿ ಈ ನಂಬರ್ ನಿಂದ ಕರೆ ಬಂದ್ರೆ ತೆಗೆದುಕೊಳ್ಳಬೇಡಿ ಅಂತಾ ಕೆಲವರು ಸಂದೇಶ ಕಳುಹಿಸುತ್ತಿದ್ದಾರೆ. ಮತ್ತೆ ಕೆಲವರು ಈ ನಂಬರ್ ನಿಂದ ಬಂದ ಕರೆ ರಿಸೀವ್ ಮಾಡಿದ್ರೆ ಫೋನ್ ಬ್ಲಾಸ್ಟ್ ಆಗಲಿದೆ ಎನ್ನುವ ವದಂತಿ ಕೂಡ ಇದೆ.

ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದೊಂದು ಸುಳ್ಳು ಸುದ್ದಿ. ಈ ನಂಬರ್ ನಲ್ಲಿ ವೈರಸ್ ಇಲ್ಲ. ಹಾಗೆ ಈ ನಂಬರ್ ನಿಂದ ಬಂದ ಕರೆ ರಿಸೀವ್ ಮಾಡಿದ್ರೆ ಬ್ಲಾಸ್ಟ್ ಆಗೋದಿಲ್ಲ. ಈ ನಂಬರ್ ಯಾರದ್ದು, ಎಲ್ಲಿಯದ್ದು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಜನರಿಗೆ ಭಯ ಹುಟ್ಟಿಸಲಾಗ್ತಾ ಇದೆ. 9 ಸಂಖ್ಯೆ ಇರುವ ಈ ನಂಬರ್ ನಿಂದ ಈವರೆಗೆ ಯಾವುದೇ ಕರೆ ಬಂದಿಲ್ಲ. ಹಾಗೆ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಜನರನ್ನು ದಿಗಿಲುಗೊಳಿಸುವ ಈ ಸಂದೇಶವನ್ನು ವಿನಃ ಕಾರಣ ವೈರಲ್ ಮಾಡುವ ಅಗತ್ಯವಿಲ್ಲ. ಹಾಗೆ ಭಯಪಡಬೇಕಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...