alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಜೊತೆ ಸೇರಿ 3.24 ಕೋಟಿ ರೂ. ಮೌಲ್ಯದ ಪುಸ್ತಕ ಕದ್ದ 73 ರ ವೃದ್ಧ

ತೆಲಂಗಾಣದಲ್ಲಿ ಚಿತ್ರ-ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮಾಲೀಕನೊಬ್ಬ ಬಾಡಿಗೆ ವಸೂಲಿ ಮಾಡಲು ವಿಭಿನ್ನ ಮಾರ್ಗ ಅನುಸರಿಸಿದ್ದಾನೆ. ಮಗನ ಜೊತೆ ಸೇರಿ ಅಂಗಡಿಯಲ್ಲಿದ್ದ ಸುಮಾರು 3.24 ಕೋಟಿ ಮೌಲ್ಯದ ಪುಸ್ತಕವನ್ನು ಕಳ್ಳತನ ಮಾಡಿದ್ದಾನೆ.

73 ವರ್ಷದ ಆರೋಪಿ ಪಿ.ನರಸಿಂಹ ರೆಡ್ಡಿ ಮಗನ ಜೊತೆ ಸೇರಿ ಈ ಕೆಲಸ ಮಾಡಿದ್ದಾನೆ. ಬಾಡಿಗೆದಾರ ತಿಂಗಳಿಗೆ 50 ಸಾವಿರ ರೂಪಾಯಿ ಬಾಡಿಗೆ ಹಣವನ್ನು ನೀಡಬೇಕಿತ್ತು. ಆದ್ರೆ 14 ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಹೇಗಾದ್ರೂ ಬಾಡಿಗೆ ವಸೂಲಿ ಮಾಡುವ ನಿರ್ಧಾರಕ್ಕೆ ಬಂದ ಮಾಲೀಕ ನರಸಿಂಹ ರೆಡ್ಡಿ ಬಾಡಿಗೆದಾರನ ಅಂಗಡಿಯಲ್ಲಿದ್ದ ಪುಸ್ತಕ ಕಳ್ಳತನ ಮಾಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನರಸಿಂಹ ರೆಡ್ಡಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ನರಸಿಂಹ ರೆಡ್ಡಿಯಿಂದ ಪುಸ್ತಕ ಖರೀದಿ ಮಾಡಿದ್ದ ಇನ್ನೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಆತ 15 ಲಕ್ಷಕ್ಕೆ ಕೆಲ ಪುಸ್ತಕ ಖರೀದಿ ಮಾಡಿ ದೆಹಲಿಯಲ್ಲಿರುವ ಪುಸ್ತಕದಂಗಡಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...