alex Certify
ಕನ್ನಡ ದುನಿಯಾ       Mobile App
       

Kannada Duniya

ಭ್ರಷ್ಟನ ಮನೆಯಲ್ಲಿ ಸಿಕ್ಕಿದ್ದು, ದಂಗಾಗುವಷ್ಟು ದುಬಾರಿ ವಾಚ್

2976938_orig

ಭ್ರಷ್ಟಾಚಾರ ತಡೆಗೆ ಏನೆಲ್ಲಾ ಕಠಿಣ ಕ್ರಮಕೈಗೊಂಡರೂ ನಿಯಂತ್ರಣ ಸಾಧ್ಯವಾಗಿಲ್ಲ. ಭ್ರಷ್ಟರ ಮನೆ ಮೇಲೆ ರೈಡ್ ಮಾಡಿ ಎಷ್ಟೆಲ್ಲಾ ಆಸ್ತಿ, ಪಾಸ್ತಿ ವಶಪಡಿಸಿಕೊಂಡ ಪ್ರಕರಣಗಳ ಬಗ್ಗೆ ಕೇಳೀರುತ್ತೀರಿ. ಇಲ್ಲೊಬ್ಬ ಭ್ರಷ್ಟ ಅಧಿಕಾರಿಯ ಮನೆಯಲ್ಲಿ ಸಿಕ್ಕ ದುಬಾರಿ ವಾಚ್ ನೋಡಿದ್ರೇ ದಂಗಾಗುತ್ತೀರಿ.

ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಇಂಜಿನಿಯರ್ ಪುಷ್ಕರ್ ಮಿಶ್ರಾ ಅವರು, ಸಹೋದ್ಯೋಗಿಯೊಂದಿಗೆ ಸೇರಿ ಮುಂಬೈನ ಬಾಂದ್ರಾದಲ್ಲಿ ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹದಳದ ಸಿಬ್ಬಂದಿ ಬಂಧಿಸಿದ್ದರು. ಬಳಿಕ ಅವರ ಮನೆಯನ್ನು ಶೋಧಿಸಿದಾಗ 20 ಲಕ್ಷ ನಗದು, ಅಪಾರ ಪ್ರಮಾಣದ ಚಿನ್ನ, ಅಕ್ರಮ ಆಸ್ತಿಯ ಮಹತ್ವದ ದಾಖಲೆ ಪತ್ರಗಳು ಕಂಡುಬಂದಿದ್ದವು. ಅದಕ್ಕಿಂತ ಮುಖ್ಯವಾಗಿ ಪುಷ್ಕರ್ ಮಿಶ್ರಾ ಅವರ ಮನೆಯಲ್ಲಿ ಬರೋಬ್ಬರಿ 72 ದುಬಾರಿ ಬೆಲೆ ವಾಚ್ ಗಳು ಸಿಕ್ಕಿದ್ದವು.

ದುಬಾರಿ ಬೆಲೆಯ ರ್ಯಾಡೋ, ಒಮೆಗಾ, ಟಿಸ್ಸಾಟ್, ಆ್ಯಪಲ್, ಸ್ಯಾಮ್ ಸಂಗ್ ಮೊದಲಾದ ಕಂಪನಿಗಳ ಬೆಲೆಬಾಳುವ ವಾಚ್ ಗಳು ದೊರೆತಿವೆ. ಇವುಗಳಲ್ಲಿ ಕೆಲವು ಸೀಮಿತ ಮಾಡೆಲ್ ಬ್ರಾಂಡ್ ಗಳಾಗಿದ್ದು, ಮಿಶ್ರಾ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿಯುವಂತಿವೆ ಎಂದು ಹೇಳಲಾಗಿದೆ. ಸದ್ಯ ಬಂಧನಕ್ಕೆ ಒಳಗಾಗಿರುವ ಮಿಶ್ರಾ ಅವರನ್ನು ಫೆಬ್ರವರಿ 10ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...