alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನಸಿಕ ಅಸ್ವಸ್ಥನ ಹೊಟ್ಟೆ ಸೇರಿತ್ತು 72 ನಾಣ್ಯ…!

ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 72 ನಾಣ್ಯಗಳು ಪತ್ತೆಯಾಗಿವೆ. ಮಾನಸಿಕ ಅಸ್ವಸ್ಥನಾಗಿದ್ದ ಈತ ನಾಣ್ಯಗಳನ್ನು ನುಂಗಿಬಿಡುತ್ತಿದ್ದ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ನಾಣ್ಯಗಳನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ.

ಕೃಷ್ಣ ಸೋಮಲ್ಯ ಸಂಬಾರ್ ಎಂಬಾತನಿಗೆ ಡಾ.ಅಮಿತ್ ಕೇಲೆ ನೇತೃತ್ವದ ತಂಡ ಆಪರೇಶನ್ ಮಾಡಿದೆ. ಕೃಷ್ಣ ಸೋಮಲ್ಯಗೆ ಲೋಹಗಳನ್ನು ನುಂಗುವ ಮೆಟಾಲೋಫಜೆಯಾ ಎಂಬ ಖಾಯಿಲೆಯಿತ್ತು. ಸುಮಾರು 20 ವರ್ಷಗಳಿಂದ ಆತ ನಾಣ್ಯ ನುಂಗುವ ಅಭ್ಯಾಸ ಮಾಡಿಕೊಂಡಿದ್ದ.

ಕೆಲವು ನಾಣ್ಯಗಳು ದೇಹದಿಂದ ಹೊರಹೋಗಿದ್ದವು, 72 ನಾಣ್ಯಗಳು ಹೊಟ್ಟೆಯಲ್ಲೇ ಸಿಕ್ಕಿಹಾಕಿಕೊಂಡಿದ್ದವು. ಇದರಿಂದಾಗಿ ಆತನಿಗೆ ವಾಂತಿ ಹಾಗೂ ಅಜೀರ್ಣದ ಸಮಸ್ಯೆಯಾಗಿತ್ತು. ಕೃಷ್ಣ ಸೋಮಲ್ಯಗೆ ಎಕ್ಸ್ ರೇ ಮಾಡಿದಾಗ ಹೊಟ್ಟೆಯಲ್ಲಿದ್ದ ನಾಣ್ಯಗಳು ಪತ್ತೆಯಾಗಿವೆ. ಸುಮಾರು ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಎಲ್ಲಾ ನಾಣ್ಯಗಳನ್ನು ಹೊರತೆಗೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...