alex Certify
ಕನ್ನಡ ದುನಿಯಾ       Mobile App
       

Kannada Duniya

ಟೌನ್ ಸ್ಕ್ವೇರ್ ಗೆ ಮೋದಿ ಹೆಸರಿಟ್ಟಿದ್ದಕ್ಕೆ ವೃದ್ಧನ ಬರ್ಬರ ಹತ್ಯೆ

ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಟೌನ್ ಸ್ಕ್ವೇರ್ ಗೆ ನರೇಂದ್ರ ಮೋದಿ ಚೌಕ ಎಂದು ಹೆಸರಿಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಗುಂಪೊಂದು 70 ವರ್ಷದ ವ್ಯಕ್ತಿಯ ತಲೆ ಕತ್ತರಿಸಿ ಹತ್ಯೆ ಮಾಡಿದೆ. ಮೋಟಾರ್ ಸೈಕಲ್ ಗಳಲ್ಲಿ ಬಂದ 40-50 ಮಂದಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ರಾಮಚಂದ್ರ ಯಾದವ್ ಅಂತಾ ಗುರುತಿಸಲಾಗಿದೆ. ಈತ ಸ್ಥಳೀಯ ಬಿಜೆಪಿ ಮುಖಂಡ ತೇಜ್ ನಾರಾಯಣ್ ಯಾದವ್ ನ ತಂದೆ. ಭದಹ ಗ್ರಾಮದಲ್ಲಿರುವ ವೃತ್ತಕ್ಕೆ ತೇಜ್ ನಾರಾಯಣ್, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದ.

ಆದ್ರೆ ಇನ್ನೊಂದು ಗುಂಪು ಆರ್ ಜೆ ಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಹೆಸರಿಡಬೇಕೆಂದು ಗದ್ದಲ ಶುರುಮಾಡಿತ್ತು. ಇದೇ ಕೋಪದಲ್ಲಿ ಅವರು ವೃದ್ಧನ ಮೇಲೆ ಹಲ್ಲೆ ಮಾಡಿದ್ದಾರೆ. ತಲೆ, ಕೈಗಳನ್ನು ಕತ್ತಿಯಿಂದ ಕತ್ತರಿಸಿ ಹಾಕಿದ್ದಾರೆ.

ತೇಜ್ ನಾರಾಯಣ್ ಸಹೋದರ ಕಮಲ್ ಯಾದವ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಪೊಲೀಸರು ಈವರೆಗೆ ನಾಲ್ವರನ್ನು ಬಂಧಿಸಿದ್ದು, ಎಲ್ಲಾ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ಕೂಡ ನಡೆದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...