alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಎಲಿಫಂಟಾ ಗುಹೆಗೆ ಬಂತು ಬೆಳಕು

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಮುಂಬೈನ ಎಲಿಫಂಟಾ ಗುಹೆಗಳಿಗೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷಗಳ ಬಳಿಕ ಕೊನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಮುಂಬೈನ ಕಡಲಿನಿಂದ 10 ಕಿ.ಮೀ ದೂರದಲ್ಲಿರುವ ಘರಪುರಿ ದ್ವೀಪದಲ್ಲಿ ಎಲಿಫಂಟಾ ಗುಹೆ ಹಾಗೂ 3 ಗ್ರಾಮಗಳಿದ್ದು, ಸಮುದ್ರದಾಳದಲ್ಲಿ 7 ಕಿ.ಮೀ. ವರೆಗೆ ಎಲೆಕ್ಟ್ರಿಕ್ ಕೇಬಲ್ ಗಳನ್ನು ಎಳೆದು ಈ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದೆ.

ಇದುವರೆಗೂ ಜನರೇಟರ್ ನಿಂದ ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು. ಈಗ ಕೇಬಲ್ ಎಳೆದಿರುವ ಕಾರಣ ನಿರಂತರ ವಿದ್ಯುತ್ ಲಭ್ಯವಾಗುತ್ತಿದೆ. ಇದರಿಂದಾಗಿ ಎಲಿಫಂಟಾ ಗುಹೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿದ್ದಾರೆಂಬ ವಿಶ್ವಾಸವನ್ನು ಅಧಿಕಾರಿಗಳು ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...