alex Certify
ಕನ್ನಡ ದುನಿಯಾ       Mobile App
       

Kannada Duniya

7 ವರ್ಷಗಳ ಬಳಿಕ ಈಕೆಗೆ ಸಿಕ್ತು ಪಾಸ್ ಪೋರ್ಟ್

05-2

ಪಾಕಿಸ್ತಾನಿ ಯುವಕನನ್ನು ಪ್ರೀತಿಸಿ ವಿವಾಹವಾಗಿ ಭಾರತದ ಪಾಸ್ ಪೋರ್ಟ್ ಅನ್ನು ವಾಪಾಸ್ ಮಾಡಿದ್ದ ಮಹಿಳೆಯೊಬ್ಬರಿಗೆ ಬರೋಬ್ಬರಿ 7 ವರ್ಷಗಳ ಬಳಿಕ ಮತ್ತೇ ಭಾರತದ ಪೌರತ್ವದ ಜೊತೆಗೆ ಪಾಸ್ ಪೋರ್ಟ್ ದೊರೆತಿದೆ.

ಅಮೆರಿಕಾಕ್ಕೆ ತೆರಳಿದ್ದ ಅಹ್ಮದಾಬಾದ್ ಯುವತಿಯೊಬ್ಬರು 2001 ರಲ್ಲಿ ಪಾಕಿಸ್ತಾನ ಮೂಲದ ಯುವಕನ ಜೊತೆ ವಿವಾಹವಾಗಿದ್ದರು. ಬಳಿಕ ಕರಾಚಿಯಲ್ಲಿ ನೆಲೆಸಿದ ಅವರು ಅದಕ್ಕೂ ಮುನ್ನ ಭಾರತದ ಪಾಸ್ ಪೋರ್ಟ್ ಅನ್ನು ವಾಪಾಸ್ ಮಾಡಿದ್ದರು.

ಈ ದಂಪತಿಗಳ 7 ವರ್ಷದ ದಾಂಪತ್ಯ ವಿಚ್ಚೇದನದಲ್ಲಿ ಕೊನೆಗೊಂಡಿದ್ದು, ಬಳಿಕ ಭಾರತಕ್ಕೆ ವಾಪಾಸ್ ಬಂದು ಕುಟುಂಬದೊಂದಿಗೆ ನೆಲೆಸಿದ್ದರು. ಈ ಮಧ್ಯೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ವ್ಯಕ್ತಿಯೊಂದಿಗೆ ಮತ್ತೇ ವಿವಾಹ ಮಾಡಿಕೊಂಡ ಮಹಿಳೆ, ಪತಿಯೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳಲು ಪಾಸ್ ಪೋರ್ಟ್ ಗಾಗಿ ಕಾಯುತ್ತಿದ್ದರು. ಇದೀಗ ಅವರಿಗೆ ಮತ್ತೇ ಭಾರತದ ಪೌರತ್ವ ಜೊತೆಗೆ ಪಾಸ್ ಪೋರ್ಟ್ ಕೂಡಾ ಸಿಕ್ಕಿದ್ದು, ಈಗ ಆಸ್ಟ್ರೇಲಿಯಾಕ್ಕೆ ತೆರಳಲು ಸಿದ್ದತೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...