alex Certify
ಕನ್ನಡ ದುನಿಯಾ       Mobile App
       

Kannada Duniya

ಜನನಿಬಿಡ ರಸ್ತೆಯಲ್ಲೇ ಸ್ಕೂಟರ್ ಚಲಾಯಿಸ್ತಾಳೆ ಈ ಪುಟ್ಟ ಪೋರಿ

hyderabad-7-year-old-drvingಹೈದರಾಬಾದಿನ ಜನನಿಬಿಡ ರಸ್ತೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ಪುಟ್ಟ ಪೋರಿಯೊಬ್ಬಳು ಸ್ಕೂಟರ್ ಚಾಲನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶರ್ಮಾ ಎಂಬ ಉದ್ಯಮಿಯ ಮಗಳಾದ ಈಕೆ, ತನ್ನ ತಂದೆಯನ್ನು ಕೂರಿಸಿಕೊಂಡು ಸ್ಕೂಟರ್ ಚಾಲನೆ ಮಾಡಿದ್ದಾಳೆ.

ಕೇವಲ ನಾಲ್ಕು ವರ್ಷಗಳಾಗಿದ್ದಾಗಲೇ ಈಕೆ, ವಾಹನ ಚಾಲನೆ ಮಾಡುವ ಉತ್ಸಾಹ ತೋರುತ್ತಿದ್ದಳಂತೆ. ಈಕೆಯ ಆಸೆಗೆ ತಂದೆ ಶರ್ಮಾ ಪ್ರೋತ್ಸಾಹಿಸಿದ್ದು, ಇದೀಗ ಜನನಿಬಿಡ ರಸ್ತೆಯಲ್ಲೇ ಸ್ಕೂಟರ್ ಚಾಲನೆ ಮಾಡುವ ಮಟ್ಟಕ್ಕೆ ತಯಾರಾಗಿದ್ದಾಳೆ.

ಆದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡುವುದು ಅಪರಾಧವಾಗಿದ್ದು, ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಉದ್ಯಮಿಯ ಅಪ್ರಾಪ್ತ ವಯಸ್ಸಿನ ಪುತ್ರನೊಬ್ಬ ಮರ್ಸಿಡೀಸ್ ಬೆಂಜ್ ಚಾಲನೆ ಮಾಡುವ ವೇಳೆ ಅಪಘಾತವೆಸಗಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...