alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಮಸ್ಥರನ್ನು ನಡುಗಿಸಿದ್ದ ದೈತ್ಯ ಹೆಬ್ಬಾವು ಸೆರೆ

python

ಗುಜರಾತ್ ನ ವಡೋದರಾದಲ್ಲಿರೋ ಗ್ರಾಮವೊಂದರಲ್ಲಿ 7 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆಯಾಗಿದೆ. ಜನನಿಬಿಡ ರಸ್ತೆಯಲ್ಲೇ ಹೆಬ್ಬಾವು ಹರಿದಾಡುತ್ತಿತ್ತು. ಅದೃಷ್ಟವಶಾತ್ ಯಾರಿಗಾದ್ರೂ ಅಪಾಯ ಸಂಭವಿಸುವ ಮುನ್ನ ಹಾವು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ.

ಕೂಡಲೇ ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯ್ತು. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ಹಿಡಿದಿದ್ದಾರೆ. ರಕ್ಷಣೆ ಮಾಡಿರೋ ಹೆಬ್ಬಾವನ್ನು ಮರಳಿ ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.

ರಸ್ತೆಯ ಪಕ್ಕದಲ್ಲಿ ಬೆಳೆದಿದ್ದ ಕಳೆಗಳ ಮಧ್ಯೆ ಹೆಬ್ಬಾವು ಆರಾಮಾಗಿ ಮಲಗಿಬಿಟ್ಟಿತ್ತು. ದೈತ್ಯ ಹೆಬ್ಬಾವನ್ನು ಸೆರೆಹಿಡಿಯುವ ಕಾರ್ಯಾಚರಣೆ ನೋಡಲೆಂದೇ ಸಾಕಷ್ಟು ಜನರು ಕೂಡ ಆಗಮಿಸಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...