alex Certify
ಕನ್ನಡ ದುನಿಯಾ       Mobile App
       

Kannada Duniya

ಆಪರೇಷನ್ ಫೇಲ್, ಮಹಿಳೆ ಸಾವು : ಆಸ್ಪತ್ರೆ ಮಾಡಿರೋ ಬಿಲ್ ಎಷ್ಟು ಗೊತ್ತಾ?

ಗುರುಗ್ರಾಮದ ಆಸ್ಪತ್ರೆಯೊಂದು ರೋಗಿಗಳನ್ನು ಅಕ್ಷರಶಃ ಸುಲಿಗೆ ಮಾಡ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಆದ್ರೆ ಸರ್ಜರಿ ವಿಫಲವಾಗಿ ಮಹಿಳೆ ಮೃತಪಟ್ಟಿದ್ದಾಳೆ. ಆಸ್ಪತ್ರೆಯವರು ಮಾತ್ರ 17 ಲಕ್ಷ ರೂಪಾಯಿ ಬಿಲ್ ಮಾಡುವ ಮೂಲಕ ಕುಟುಂಬಸ್ಥರಿಗೆ ಶಾಕ್ ಕೊಟ್ಟಿದ್ದಾರೆ.

ರಾಜಸ್ತಾನ ಮೂಲದ 67 ವರ್ಷದ ಸಾವಿತ್ರಿ ದೇವಿ ಎಂಬಾಕೆಯನ್ನು ಜನವರಿ 8ರಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪಿತ್ತಕೋಶದಲ್ಲಿ ಕಲ್ಲು ಬೆಳೆದಿದ್ದರಿಂದ ಅದನ್ನು ಸರ್ಜರಿ ಮೂಲಕ ತೆಗೆಯಬೇಕೆಂದು ವೈದ್ಯರು ತಿಳಿಸಿದ್ರು.

ಮರುದಿನ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದ್ರೆ ಸರ್ಜರಿ ಬಳಿಕ ಸಾವಿತ್ರಿ ದೇವಿ ತೀವ್ರ ನೋವು ಅನುಭವಿಸಿದ್ರು. ಪರೀಕ್ಷೆ ನಡೆಸಿದಾಗ ಆಪರೇಶನ್ ಸಮಯದಲ್ಲಿ ಆಕೆಯ ಕರುಳಿಗೆ ಪೆಟ್ಟು ಬಿದ್ದಿರೋದು ಬಹಿರಂಗವಾಗಿತ್ತು. ನಂತರ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲೇ ಆಕೆಗೆ 3 ಆಪರೇಷನ್ ಮಾಡಲಾಯ್ತು.

ಆದ್ರೆ ಜನವರಿ 26ರಂದು ಸಾವಿತ್ರಿ ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತಪಟ್ಟಿದ್ದಾಳೆ. ಆಸ್ಪತ್ರೆಯವರು ಚಿಕಿತ್ಸೆಗೆ 17 ಲಕ್ಷ ವೆಚ್ಚವಾಗಿದೆ ಅಂತಾ ಸಾವಿತ್ರಿ ಕುಟುಂಬದವರಿಗೆ ಬಿಲ್ ಕೊಟ್ಟಿದ್ದಾರೆ. ಇದನ್ನು ನೋಡಿ ಆಘಾತಗೊಂಡ ಸಾವಿತ್ರಿ ಅವರ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...