alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಭಮೇಳದಲ್ಲಿ ಕಾಣೆಯಾಗಿದ್ದ ವೃದ್ಧ 5 ವರ್ಷಗಳ ಬಳಿಕ ಸಿಕ್ಕಿದ್ಹೇಗೆ?

ಅಲಹಾಬಾದ್ ನಲ್ಲಿ 5 ವರ್ಷಗಳ ಹಿಂದೆ ನಡೆದ ಕುಂಭಮೇಳದಲ್ಲಿ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಕೊನೆಗೂ ತಮ್ಮ ಕುಟುಂಬ ಸೇರಿದ್ದಾರೆ. ಅಪ್ನಾ ಘರ್ ಎಂಬ ವೃದ್ಧಾಶ್ರಮ 67 ವರ್ಷದ ಸಾತಾರಾಮ್ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದೆ.

ಕಳೆದ ವರ್ಷದ ಜನವರಿ 31ರಂದು ಸಾತಾರಾಮ್ ಅವರನ್ನು ಅಪ್ನಾ ಘರ್ ವೃದ್ಧಾಶ್ರಮಕ್ಕೆ ಕರೆತರಲಾಗಿತ್ತು. ತಮ್ಮ ಹೆಸರು, ವಿಳಾಸ ಯಾವುದನ್ನೂ ಸಾತಾರಾಮ್ ಯಾರ ಬಳಿಯೂ ಹಂಚಿಕೊಂಡಿರಲಿಲ್ಲ. ಆ ಬಗ್ಗೆ ಮಾಹಿತಿಯನ್ನೇ ನೀಡುತ್ತಿರಲಿಲ್ಲ.

ಸಪ್ಟೆಂಬರ್ ನಲ್ಲಿ ಅವರನ್ನು ಬಿಕನೇರ್ ನಲ್ಲಿರೋ ವೃದ್ಧಾಶ್ರಮಕ್ಕೆ ಕರೆತರಲಾಗಿತ್ತು. ಆತ ಹೆಸರು ಹೇಳದೇ ಇದ್ದಿದ್ರಿಂದ ಎಲ್ಲರೂ ಕುಂದನ್ ಅಂತಾ ಕರೆಯಲು ಆರಂಭಿಸಿದ್ದರು. ನಂತರ DLSA ತಂಡದ ಬಳಿ ಸಾತಾರಾಮ್ ತಮ್ಮ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ತಾವು ಬಾರ್ಮರ್ ಮೂಲದವರೆಂದು ಹೇಳಿಕೊಂಡಿದ್ದಾರೆ. 2012ರಲ್ಲಿ ಬಾರ್ಮರ್ ನ ವ್ಯಕ್ತಿಯೊಬ್ಬ ಕಾಣೆಯಾಗಿರುವುದಾಗಿ ದೂರು ಕೂಡ ದಾಖಲಾಗಿತ್ತು. ಪೊಲೀಸರು ಆ ಕುಟುಂಬದವರಿಗೆ ವಾಟ್ಸಾಪ್ ಮೂಲಕ ಸಾತಾರಾಮ್ ಫೋಟೋ ಕಳುಹಿಸಿದ್ರು. ಕಾಣೆಯಾಗಿದ್ದ ವ್ಯಕ್ತಿ ನಮ್ಮ ಕುಟುಂಬದವನೇ ಅನ್ನೋದನ್ನು ಖಚಿತಪಡಿಸಿದ ಬಳಿಕ, ಸಾತಾರಾಮ್ ರನ್ನು ಮನೆಗೆ ಕರೆದೊಯ್ಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...