alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೆಶರ್ ಕುಕ್ಕರ್ ಬಡಿದು ವೃದ್ದನ ಸಾವು

62 ವರ್ಷದ ವೃದ್ಧರೊಬ್ಬರು ಪ್ರೆಶರ್ ಕುಕ್ಕರ್ ಪೆಟ್ಟಿನಿಂದ ಮೃತಪಟ್ಟ ಘಟನೆ ನವಿ ಮುಂಬೈನಲ್ಲಿ ನಡೆದಿದೆ.

ಮೃತ ವಿಜಯ್ ಕುಮಾರ್ ದೋತ್ರೆ ಅವರ ಮನೆಯಲ್ಲಿನ ಸದ್ದು ಕೇಳಿ ನೆರೆಮನೆಯವರು ಧಾವಿಸಿದಾಗ ವಿಜಯ್ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ.

ವಿಜಯ್ ಕುಮಾರ್ ಅವರ ಮಗ ಸ್ಕಿಜೋಫ್ರೇನಿಯ ಪೀಡಿತನಾಗಿದ್ದು ಘಟನೆ ನಡೆದಾಗ ಆತ ಕೂಡ ಮನೆಯಲ್ಲಿದ್ದ. ಆತನಿಗೂ ಗಾಯಗಳಾಗಿದೆ. ಅತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಅಂದಹಾಗೆ ಅವರ ಮಗನೇ ಕುಕ್ಕರ್ ನಿಂದ ಹೊಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನುಮಾಸ್ಪದ ಕೊಲೆ ಪ್ರಕರಣ ದಾಖಲಿಸಿ ದಾಖಲೆ ಕಲೆ ಹಾಕಲಾರಂಭಿಸಿದ್ದಾರೆ.

ಸ್ಕಿಜೋಫ್ರೇನಿಯ ಒಂದು ಮಾನಸಿಕ ಖಾಯಿಲೆಯಾಗಿದ್ದು, ಕೆಲವರಲ್ಲಿ ಹದಿಹರೆಯದ ತರುವಾಯ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೊಳಗಾದವರು ಅರಿವಿನಿ ಕೊರತೆ ಮತ್ತು ಭ್ರಮೆಗಳಲ್ಲಿ ಬದುಕುತ್ತಿರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...