alex Certify
ಕನ್ನಡ ದುನಿಯಾ       Mobile App
       

Kannada Duniya

ನಡುಗಡ್ಡೆಯಲ್ಲಿ ಸಿಲುಕಿಕೊಂಡ 600 ಜನ 

ವರುಣನ ಮುನಿಸಿಗೆ ಕೇರಳ ಸ್ತಬ್ಧ. ಎಲ್ಲಿ ನೋಡಿದ್ರೂ ನೀರು….ಕಣ್ಣು ಹಾಯಿಸಿದಷ್ಟು ದೂರ ನೀರು. ಈ ಪ್ರವಾಹದಿಂದ ಬಚಾವ್ ಆಗೋದು, ಅಲ್ಲಿನ ಜನರಿಗೆ ಸವಾಲಾಗಿದೆ. ಸುಮಾರು 600ಕ್ಕೂ ಹೆಚ್ಚು ಜನ ಕೇರಳದ ಕರುಕಪಿಲ್ಲಿಯಲ್ಲಿ ಸಿಲುಕಿಕೊಂಡಿದ್ದು, ನಡುಗಡ್ಡೆಯಂತಾಗಿದೆ. ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮೂವತ್ತುಪುಳಾ ನದಿ ತುಂಬಿ ಹರಿದಿದ್ದು, ನದಿ ತಟದಲ್ಲಿರುವ ಊರುಗಳಿಗೆ ಹಾನಿ ಆಗಿದೆ.

200ಕ್ಕೂ ಹೆಚ್ಚು ಕುಟುಂಬಗಳು ಈ ಗ್ರಾಮದಲ್ಲಿ ವಾಸ ಮಾಡುತ್ತವೆ. ತೀವ್ರ ಸಂಕಷ್ಟದಲ್ಲಿರುವ ಕೆಲ ನಿರಾಶ್ರಿತರನ್ನು 5 ರಕ್ಷಣಾ ತಂಡಗಳು ಬೋಟ್ ಮುಖಾಂತರ ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಈ ಪ್ರದೇಶದ ಸುತ್ತಮುತ್ತ ಮಳೆ ರುದ್ರ ನರ್ತನಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಮಳೆಯ ನೀರು ಮನೆಗೆ ಆವರಿಸುತ್ತಿದ್ದಂತೆ ಮನೆಯ ಮೇಲ್ಛಾವಣಿಯ ಮೇಲೆ ನಿಂತು ರಕ್ಷಣೆಗಾಗಿ ಹಾತೊರೆಯುತ್ತಿದ್ದಾರೆ. ನಿರಾಶ್ರಿತರಿಗೆ ಆಹಾರ ಹಾಗೂ ಬಟ್ಟೆಗಳನ್ನು ಬೋಟ್ ಮೂಲಕ ತಲುಪಿಸಲಾಗುತ್ತಿದೆ.

ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಲ್ಲಿಂದ ಮಹಿಳೆಯರು ಹಾಗೂ ಮಕ್ಕಳನ್ನು ಸಂರಕ್ಷಿಸುವುದು ಸವಾಲಿನ ಕೆಲಸವಾಗಿದೆ. ವಿಪತ್ತು ರಕ್ಷಣಾ ದಳ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಇದ್ದು, ರಕ್ಷಣಾ ಕಾರ್ಯಕ್ಕೆ ಇನ್ನು ಹೆಚ್ಚಿನ ಸಿಬ್ಬಂದಿಗಳ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ.

ನೀರಿನ ಮಧ್ಯ ಸಿಕ್ಕಿ ಹಾಕಿಕೊಂಡ ಜನ ತಮ್ಮ ಎಲ್ಲ ಪ್ರಮುಖ ಕಡತಗಳನ್ನು ಕಳೆದುಕೊಂಡಿದ್ದಾರೆ. ನಿರಾಶ್ರಿತರಿಗೆ ಆಹಾರ ಹಾಗೂ ಬಟ್ಟೆಯ ಅವಶ್ಯಕತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...